ತುಮಕೂರು: ಕೊತ್ತಂಬರಿ ಸೊಪ್ಪಿಗಾಗಿ ಜನರು ಮುಗಿಬಿದ್ದ ಘಟನೆ ತುಮಕೂರು ನಗರದ ಎನ್ ಆರ್. ಕಾಲೋನಿಯಲ್ಲಿ ನಡೆದಿದೆ.

ಪಾಲಿಕೆ ಸದಸ್ಯ ಶ್ರೀನಿವಾಸ್​​ರಿಂದ ಉಚಿತವಾಗಿ ಸೊಪ್ಪು ಹಂಚಲಾಗ್ತಿತ್ತು. ಈ ವೇಳೆ ಜನ ಸಾಮಾಜಿಕ ಅಂತರ ಮರೆತು ತಾ ಮುಂದು ನಾ ಮುಂದು ಎಂದು ಸೊಪ್ಪು ಪಡೆಯಲು ಮುಗಿಬಿದ್ದರು. ಫ್ರೀಯಾಗಿ ಸಿಗುವ ಸೊಪ್ಪಿಗಾಗಿ ಗುಂಪಿನಲ್ಲಿ ತಳ್ಳಾಟ ನೂಕಾಟ  ನಡೆಯಿತು. ಕೊನೆಗೆ ಸೊಪ್ಪು ಹಂಚುತ್ತಿದ್ದವರು ಜನರ ತಳ್ಳಾಟ ನೋಡಿ, ಆಟೋ ಮೇಲಿಂದಲೇ ಸೊಪ್ಪಿನ ಕಟ್ಟನ್ನು ಎಸೆದರು.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡನೇ ಕೊರೊನಾ ಅಲೆ ತಗ್ಗಿದ ಬೆನ್ನಲ್ಲೇ ಜನರು ಮುಂಜಾಗ್ರತಾ ಕ್ರಮಗಳನ್ನ ಮರೆತಿರೋದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

The post ಕೊರೊನಾಗೆ ಕೇರ್​​ ಮಾಡ್ದೆ, ಫ್ರೀ ಕೊತ್ತಂಬರಿ ಸೊಪ್ಪಿಗಾಗಿ ಮುಗಿಬಿದ್ದ ಜನ appeared first on News First Kannada.

Source: newsfirstlive.com

Source link