ಯಾದಗಿರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದೆ. ಅದನ್ನ ನಿಯಂತ್ರಣ ಮಾಡೋಕೆ ರಾಜ್ಯದಲ್ಲಿ ಕ್ಲೋಸ್​​ಡೌನ್ ಬೆನ್ನಲ್ಲೇ ಇಂದಿನಿಂದ 14 ದಿನಗಳ ಕಠಿಣ ಲಾಕ್​ಡೌನ್ ಜಾರಿ ಮಾಡಲಾಗಿದೆ. ಆದ್ರೆ ಕೆಲವು ಜನರು ಮಾತ್ರ ಎಷ್ಟೇ ಎಚ್ಚರಿಕೆ ನೀಡಿದ್ರೂ, ರೂಪಾಂತರಿ ವೈರಸ್​ ಬಗ್ಗೆ ಎಷ್ಟೇ ಅರಿವು ಮೂಡಿಸಿದ್ರೂ ಕೇರ್ ಮಾಡ್ತಿಲ್ಲ.

ಯಾದಗಿರಿಯಲ್ಲಿ ಕೊರೊನಾ ನಡುವೆಯೂ ನಿಯಮ ಉಲ್ಲಂಘಿಸಿ ಅದ್ದೂರಿ ಜಾತ್ರೆ ನೆರವೇರಿಸಲಾಗಿದೆ. ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಗ್ರಾಮದೇವತೆ ಜಾತ್ರೆ ನಡೆದಿದ್ದು, ತಡವಾಗಿ ಬೆಳಕಿದೆ ಬಂದಿದೆ. ಜಾತ್ರೆಯಲ್ಲಿ ಸೇರಿದ ಸಾವಿರಾರು ಜನ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲಿಸದೇ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಗ್ರಾಮಸ್ಥರು ಗ್ರಾಮದೇವತೆ ಜಾತ್ರೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾವಿರಾರು ಜನ ಸೇರಿಸಿ ಜಾತ್ರೆ ಮಾಡಿದ್ರು ಕೂಡ ತಡೆಗಟ್ಟಲು ಜಿಲ್ಲಾಡಳಿತ ವಿಫಲವಾಗಿದೆ. ಕೋವಿಡ್ ಸಂದರ್ಭದಲ್ಲಿ ಇಂತಹ ಜಾತ್ರೆಗೆ ಅನುಮತಿ ನೀಡಿದ್ದು ಯಾರು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಒಂದು ತಿಂಗಳ ಹಿಂದೆ ಇದೇ ಗ್ರಾಮದಲ್ಲಿ ರಥೋತ್ಸವ ಮಾಡಿದ್ದರು. ಈ ವೇಳೆ ರಥದ ಮೇಲ್ಬಾಗ ಮುರಿದುಬಿದ್ದು ಭಾರೀ ಅನಾಹುತ ನಡೆದಿತ್ತು. ಜಿಲ್ಲೆಯಲ್ಲಿ ದಿನಕ್ಕೆ 800 ರಿಂದ 1000 ಸಾವಿರ ಕೋವಿಡ್ ಪ್ರಕರಣಗಳು ಬೆಳಕಿಗೆ ಬರ್ತಿವೆ. ಹೀಗಿದ್ರೂ ಜಾತ್ರೆ ನಡೆದಿದ್ದು, ಕೋವಿಡ್ ಕಂಟ್ರೋಲ್​ಗೆ ತರುವಲ್ಲಿ ಜಿಲ್ಲಾಡಳಿತ ವಿಫಲವಾಗ್ತಿದೆ ಎಂದು ಆರೋಪಿಸಲಾಗಿದೆ.

The post ಕೊರೊನಾಗೆ ಕ್ಯಾರೆ ಎನ್ನದ ಜನ: ನಿಮಯ ಉಲ್ಲಂಘಿಸಿ ಅದ್ದೂರಿ ಜಾತ್ರೆ ಆಚರಣೆ appeared first on News First Kannada.

Source: newsfirstlive.com

Source link