ಕೊರೊನಾಗೆ ತುತ್ತಾಗಿದ್ದ ಕಿರಾತಕ ನಿರ್ದೇಶಕ ಪ್ರದೀಪ್​ ರಾಜ್​ ನಿಧನ


ಬೆಂಗಳೂರು: ಇತ್ತೀಚಿಗೆ ಕೊರೊನಾಗೆ ತುತ್ತಾಗಿದ್ದ ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಪ್ರದೀಪ್​ ರಾಜ್​ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಡಯಾಬಿಟಿಸ್ ನಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಇತ್ತೀಚಿಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇಂದು ಬೆಳಗ್ಗೆ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ಪ್ರಶಾಂತ್ ಮಾಹಿತಿ ನೀಡಿದ್ದಾರೆ. 46 ವರ್ಷದ ಪ್ರದೀಪ್​ ರಾಜ್​ ಪತ್ನಿ ಹಾಗು ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಪಾಂಡಿಚೆರಿಯಲ್ಲಿ ಇಂದು ಮಧ್ಯಾಹ್ನ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

2011ರಲ್ಲಿ ತೆರೆಕಂಡ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ‘ಕಿರಾತಕ’ ಸಿನಿಮಾವನ್ನು ಪ್ರದೀಪ್​ ರಾಜ್​ ನಿರ್ದೇಶಿಸಿದ್ದರು. ಈ ಸಿನಿಮಾ ಅಂದು ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿದ್ದು ಯಶ್​ ಹಾಗೂ ಪ್ರದೀಪ್​​ ರಾಜ್​ಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಇನ್ನು ಕಿರಾತಕ-2 ಸಿನಿಮಾವನ್ನು ಕೂಡ ಅವರೇ ನಿರ್ದೇಶಿಸಿದ್ದು ಸದ್ಯ ರಿಲೀಸ್​ಗೆ ರೆಡಿಯಿದೆ. ಪ್ರದೀಪ್​ ರಾಜ್​ ನಿಧನಕ್ಕೆ ಈಡೀ ಚಿತ್ರರಂಗ ಕಂಬನಿ ಮಿಡಿದಿದೆ.

News First Live Kannada


Leave a Reply

Your email address will not be published. Required fields are marked *