ಕೊರೊನಾಗೆ ಮತ್ತೊಂದು ರಾಮಬಾಣ; ಸೋಂಕನ್ನ ಕಂಟ್ರೋಲ್ ಮಾಡ್ತಿದ್ಯಂತೆ ಈ Chewing Gum..!


ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೊರೊನಾ ಹಬ್ಬುವಿಕೆ ಕಡಿಮೆ ಮಾಡುವ ಚ್ಯುಯಿಂಗ್ ಗಮ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಯೂನಿವರ್ಸಿಟಿಯ ಸಂಶೋಧಕ ಹೆನ್ರಿ ಡೇನಿಯಲ್ ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್​​ ನಮ್ಮ ಲಾಲಾರಸ ಗ್ರಂಥಿಗಳಲ್ಲಿ ಉಳಿದುಕೊಳ್ಳುತ್ತವೆ. ಹೀಗಾಗಿ ಯಾರಾದರೂ ಸೀನಿದಾಗ, ಕೆಮ್ಮಿದಾಗ ಅಥವಾ ಮಾತನಾಡಿದಾಗ ಹನಿಗಳ ಮೂಲಕ ಬಹಳ ಸುಲಭವಾಗಿ ಸೋಂಕು ಹರಡುತ್ತದೆ.

ಈ ಚ್ಯುಯಿಂಗ್ ಗಮ್ ಅಗೆಯುವಾಗ ನಮ್ಮ ಎಂಜಲು ಅಥವಾ ಲಾಲಾರಸದಲ್ಲಿ ನಿಲ್ಲುವ ವೈರಸ್ ಅನ್ನು ತಟಸ್ಥಗೊಳಿಸಲು ಅವಕಾಶ ನೀಡುತ್ತದೆ. ಇದು ರೋಗ ಹರಡುವ ಮೂಲವನ್ನು ಕಟ್ಟಿಹಾಕುವುದರಿಂದ ಪ್ರಸರಣವನ್ನು ಸಂಭಾವ್ಯವಾಗಿ ತಗ್ಗಿಸುತ್ತದೆಯಂತೆ.

The post ಕೊರೊನಾಗೆ ಮತ್ತೊಂದು ರಾಮಬಾಣ; ಸೋಂಕನ್ನ ಕಂಟ್ರೋಲ್ ಮಾಡ್ತಿದ್ಯಂತೆ ಈ Chewing Gum..! appeared first on News First Kannada.

News First Live Kannada


Leave a Reply

Your email address will not be published. Required fields are marked *