ರಾಜ್ಯದಲ್ಲಿ ಕೊರೊನಾ ವೈರಸ್‌ನ ಅಟ್ಟಹಾಸ ಎಲ್ಲಿಲ್ಲದೇ ಮಿತಿ ಮೀರ್ತಾಯಿರೋ ಹಿನ್ನೆಲೆ. ಅಬಕಾರಿ ಸಚಿವ ಕೆ. ಗೋಪಾಲಯ್ಯರವರ ಆಪ್ತ ಸಹಾಯಕ ಕೋವಿಡ್​ 19ಗೆ ಬಲಿಯಾಗಿದ್ದಾರೆ. ಮಂಜುನಾಥ್​ ಗೋಪಾಲಯ್ಯ ಅವರ ಆಪ್ತ ಸಹಾಯಕ, ಇಂದು ಬೆಳಗ್ಗೆ ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ.

67 ವರ್ಷದ ಮಂಜುನಾಥ್ ಮೂರ್ನಾಲ್ಕು ದಿನಗಳ ಹಿಂದೆ ನಂದಿನಿ ಲೇಔಟ್​ನ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿನ ಕಾರಣ ದಾಖಲಾಗಿ ಚಿಕಿತ್ಸೆ ಪಡಿತಾಯಿದ್ರು. ಆದ್ರೆ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.ಕಳೆದವಾರವಷ್ಟೇ ಮಂಜುನಾಥ್​ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು.ತಾಯಿ ಮೃತಪಟ್ಟ ಮೇಲೆ ಮಂಜುನಾಥ್ ಮನೆಯಲ್ಲಿದ್ದವರಿಗೆಲ್ಲಾ ಸೋಂಕು ತಗುಲಿತ್ತು, ಹೀಗಾಗಿ ಅವ್ರಿಗೂ ಸೋಂಕು ತಗುಲಿದ ಕಾರಣ ಇಂದು ಕೊನೆಯುಸಿರೆಳೆದಿದ್ದಾರೆ.ಸದ್ಯ, ತಾವರೆಕೆರೆ ಸಮೀಪದ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಕೆ.ಗೋಪಾಲಯ್ಯ ಸಕಲ ಏರ್ಪಾಡುಗಳನ್ನ ಮಾಡಿಸಿದ್ದಾರೆ.

The post ಕೊರೊನಾಗೆ ಸಚಿವ ಕೆ.ಗೋಪಾಲಯ್ಯ ಆಪ್ತ ಸಹಾಯಕ ಬಲಿ appeared first on News First Kannada.

Source: newsfirstlive.com

Source link