ಕೊರೊನಾಗೆ ಹೆದರಿ ಮೂವರು ಮಹಿಳೆಯರು 15 ತಿಂಗಳು ಮನೆಯಿಂದ ಹೊರಬರಲೇ ಇಲ್ಲ

ಕೊರೊನಾಗೆ ಹೆದರಿ ಮೂವರು ಮಹಿಳೆಯರು 15 ತಿಂಗಳು ಮನೆಯಿಂದ ಹೊರಬರಲೇ ಇಲ್ಲ

ಹೈದರಾಬಾದ್​​: ಮಾರಕ ಕೊರೊನಾ ವೈರಸ್​​​ಗೆ ಹೆದರಿ ಒಂದೇ ಕುಟುಂಬ ಮೂವರು ಮಹಿಳೆಯರು ಸುಮಾರು 15 ತಿಂಗಳುಗಳ ಕಾಲ ಮನೆಯಲ್ಲೇ ಸೆಲ್ಫ್​​ ಕ್ವಾರಂಟೀನ್​ ಆಗಿದ್ದ ಅಚ್ಚರಿ ಘಟನೆಯೊಂದು ಈಗ ಬಯಲಿಗೆ ಬಂದಿದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಡಲಿ ಗ್ರಾಮದ ಒಂದೇ ಕುಂಟುಬದ ರುತ್ತಮ್ಮ (45), ಕಾಂತಮಣಿ (30), ರಾಣಿ (32) ಎಂಬ ಮೂವರು ಮಹಿಳೆಯರು ಕೊರೊನಾಗೆ ಹೆದರಿ ಮನೆಯಲ್ಲೇ ಕ್ವಾರಂಟೀನ್​ ಆದವರು ಎಂದು ತಿಳಿದು ಬಂದಿದೆ.

ಜಾನ್​ ಬೆನ್ನಿ ಎಂಬ ವ್ಯಕ್ತಿಯೊಬ್ಬರು ಕಡಲಿ ಗ್ರಾಮದಲ್ಲಿ ಸೈಕಲ್​​ ರಿಪೇರ್​ ಶಾಪ್​​ ನಡೆಸುತ್ತಿದ್ದರು. ಇವರ ಹೆಂಡತಿ ರುತ್ತಮ್ಮ. ಈ ದಂಪತಿಗೆ ಮೂವರು ಮಕ್ಕಳು. ಇವರ ಹೆಸರು ಚಿನ್ನಬಾಬು, ಕಾಂತಮಣಿ ಮತ್ತು ರಾಣಿ. ಈ ಕುಟುಂಬದ ಹೆಣ್ಣುಮಕ್ಕಳೇ ಸುಮಾರು 15 ತಿಂಗಳು ಕೊರೊನಾಗೆ ಹೆದರಿ ಕ್ವಾರಂಟೀನ್​​ ಆಗಿದ್ದರು.

ಸುಮಾರು ಒಂದು ವರ್ಷ ಮೂರು ತಿಂಗಳು ಮನೆಯಿಂದ ಹೊರಗೆ ಬಾರದ ಕಾರಣ ಮೂವರು ಮಹಿಳೆಯರು ಅಪೌಷ್ಟಿಕತೆ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಸದ್ಯ ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಾನ್​​ ಬೆನ್ನಿ ಮತ್ತು ಮಗ ಚಿನ್ನಬಾಬು ಆಗಾಗ ಕೆಲಸದ ಮೇಲಾದ್ರೂ ಹೊರಗೆ ಹೋಗುತ್ತಿದ್ದರು. ಕಳೆದ ವರ್ಷ ಮಾರ್ಚ್​​ನಲ್ಲಿ ಪಕ್ಕದ ಮನೆ ಮಹಿಳೆಯೊಬ್ಬರು ಕೊರೊನಾಗೆ ಬಲಿಯಾಗಿದ್ದರು. ಬಳಿಕ ಕೊರೊನಾಗೆ ಹೆದರಿದ ಈ ಮೂವರು ಮಹಿಳೆಯರು ಮನೆಯಿಂದ ಹೊರಗೆ ಬರಲೇ ಇಲ್ಲ. ತಮ್ಮ ಪಾಡಿಗೆ ಸೆಲ್ಫ್​​ ಕ್ವಾರಂಟೀನ್​​ ಆಗಿದ್ದರು ಎಂದು ಗ್ರಾಮದ ಮುಖ್ಯಸ್ಥ ಗುಣನಾದ ಎಂಬುವರು ತಿಳಿಸಿದರು.

The post ಕೊರೊನಾಗೆ ಹೆದರಿ ಮೂವರು ಮಹಿಳೆಯರು 15 ತಿಂಗಳು ಮನೆಯಿಂದ ಹೊರಬರಲೇ ಇಲ್ಲ appeared first on News First Kannada.

Source: newsfirstlive.com

Source link