ಕೊಪ್ಪಳ: ಮಹಾಮಾರಿ ಕೊರೊನಾಗೆ ಇಂದು 11 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ತಾಲೂಕಿನ ಕುಣೆಗೇರಿ ಗ್ರಾಮದ 11 ವರ್ಷದ ಬಾಲಕಿ ಮಾನಸ ಸಾವನ್ನಪ್ಪಿದ್ದಾಳೆ. ಕಳೆದ ಹತ್ತು ದಿನಗಳಿಂದ ಮಾನಸ ಜ್ವರದಿಂದ ಬಳಲುತ್ತಿದ್ದಳು. ಪೋಷಕರು ಆಕೆಗೆ ಟೈಫಾಯ್ಡ್ ಆಗಿದೆ ಎಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಕೂಡ ಜ್ವರ ತಗ್ಗಿರಲಿಲ್ಲ. ಇಂದು ಆಕೆಗೆ ಜ್ವರ ತೀವ್ರವಾಗಿದ್ದು, ಉಸಿರಾಟ ಸಮಸ್ಯೆ ಕೂಡ ಕಾಣಿಸಿಕೊಂಡಿದೆ. ತಕ್ಷಣಕ್ಕೆ ಆಕೆಯನ್ನು ಪೋಷಕರು ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಈ ವೇಳೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಉಸಿರಾಟದಿಂದ ಬಳಲುತ್ತಿದ್ದ ಆಕೆಯನ್ನು ಎಷ್ಟೇ ಪ್ರಯತ್ನ ನಡೆಸಿದರೂ ಉಳಿಸಿಕೊಳ್ಳಲಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬಾಲಕಿಯನ್ನು ಕಳೆದುಕೊಂಡ ಪೋಷಕರು ಆಕ್ರಂದನ ಮುಗಿಲು ಮುಟ್ಟಿತ್ತು. ಪಾಲಕರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತೋರಿಸದೆ ಗ್ರಾಮದಲ್ಲಿರುವ ಆರ್ ಎಂಪಿ ವೈದ್ಯರ ಬಾಲಕಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೂ ಜ್ವರ ಕಂಟ್ರೋಲ್ ಆಗಿಲ್ಲ ನಂತರ ಜಿಲ್ಲಾ ಆಸ್ಪತ್ರೆ ಬಾಲಕಿಯನ್ನು ಕರೆದುಕೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

The post ಕೊರೊನಾಗೆ 11 ವರ್ಷದ ಬಾಲಕಿ ಬಲಿ appeared first on Public TV.

Source: publictv.in

Source link