ಚಾಮರಾಜನಗರ: ಚಾಮರಾಜನಗರ: ತಮ್ಮ ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕು ಹೆಚ್.ಮೂಕಹಳ್ಳಿಯಲ್ಲಿ ಘಟನೆ ನಡೆದಿದೆ.

ಮಹದೇವಪ್ಪ (46), ಪತ್ನಿ ಮಂಗಳ, ಗೀತಾ (12) ಮತ್ತು ಶೃತಿ (10) ವರ್ಷದ ಪುತ್ರಿಯರು ನೇಣಿಗೆ ಶರಣಾಗಿದ್ದಾರೆ. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮಸ್ಥರಿಗೆ ಶಾಕ್​ ನೀಡಿದೆ. 20 ದಿನಗಳ ಹಿಂದೆಯಷ್ಟೇ ಕೊರೊನಾ ಪಾಸಿಟಿವ್​​ಗೆ ಒಳಗಾಗಿದ್ದ ಮಹಾದೇವಪ್ಪ ಅವರು ಹೋಂ ಐಸೊಲೇಷನ್​ಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಇದೀಗ ಬೆಳಗ್ಗೆ ಇಡೀ ಕುಟುಂಬ ನೇಣಿಗೆ ಶರಣಾಗಿದೆ. ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪರಿಚಿತರು ಕೂಡ ತಿರಸ್ಕಾರ ಮನೋಭಾವನೆಯಿಂದ ನೋಡುತ್ತಿದ್ದರು. ಇದರಿಂದ ಕುಟುಂಸ್ಥರು ಮಾನಸಿಕವಾಗಿ ನೊಂದು ಕೊಂಡಿದ್ದರು ಎನ್ನಲಾಗಿದೆ. ಅಲ್ಲದೇ ಕೊರೊನಾ ಬಂದ ಕಾರಣ ಕಳೆದ 20 ದಿನಗಳಿಂದ ಮಹದೇವಸ್ವಾಮಿ ಡೈರಿಗೆ ಹಾಲು ಹಾಕುವುದನ್ನು ನಿಲ್ಲಿಸಿದ್ದರು. ಅಲ್ಲದೇ ಕೊರೊನಾ ಬಂದ ಬಳಿಕ ಕೂಲಿ ಕೆಲಸಕ್ಕೂ ಹೋಗಲಾಗದೆ ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

The post ಕೊರೊನಾದಿಂದಾಗಿ ಪರಿಚಿತರಿಂದ ತಿರಸ್ಕಾರ- ಹೋಮ್ ಐಸೋಲೇಷನ್​​ನಲ್ಲಿದ್ದ ನಾಲ್ವರು ನೇಣಿಗೆ ಶರಣು appeared first on News First Kannada.

Source: newsfirstlive.com

Source link