ವಿಜಯನಗರ: ಅಂತಾರಾಷ್ಟ್ರೀಯ ಕ್ರೀಡಾಪಟು, ಹೊಸಪೇಟೆಯ ಕಿಚಡಿ ದಯಾನಂದ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ವೇಯ್ಟ್​​​ ಲಿಫ್ಟರ್​ ಆಗಿದ್ದ ದಯಾನಂದ ಅವರಿಗೆ ಕಳೆದ ಒಂದು ವಾರದ ಹಿಂದೆಯಷ್ಟೇ ಕೊರೊನಾ ಸೋಂಕು ದೃಢವಾಗಿತ್ತು. ಸ್ಪರ್ಧೆಯಲ್ಲಿ ಭಾಗಿಯಾಗಲು ಕಳೆದ 25 ದಿನಗಳ ಹಿಂದೆ ಕಾಶ್ಮೀರಕ್ಕೆ ಹೋಗಿದ್ದರು. ಈ ವೇಳೆಯೇ ಅವರಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿತ್ತು.

ದಯಾನಂದ ಅವರು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

 

The post ಕೊರೊನಾದಿಂದ ಅಂತರಾಷ್ಟ್ರೀಯ ವೇಯ್ಟ್​​ ಲಿಫ್ಟರ್ ಕಿಚಡಿ ದಯಾನಂದ್ ನಿಧನ appeared first on News First Kannada.

Source: newsfirstlive.com

Source link