ನವದೆಹಲಿ: ಕೊರೊನಾ ವಿಚಾರದಲ್ಲಿ ದೆಹಲಿ ಸರ್ಕಾರಕ್ಕೆ ನಿಟ್ಟುಸಿರು ಬಿಡುವಂತಹ ಫಲಿತಾಂಶ ಸಿಕ್ಕಿದೆ. ಲಾಕ್​ಡೌನ್ ಕೆಲಸ ಮಾಡಿದ್ದು, ಕಳೆದ 24 ಗಂಟೆಯಲ್ಲಿ 8,500 ಕೊರೊನಾ ಕೇಸ್ ದಾಖಲಾಗಿದೆ ಅಂತಾ ಸಿಎಂ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ಲಾಕ್​ಡೌನ್ ಕೆಲಸ ಮಾಡಿದೆ
ಮಾಧ್ಯಮಗಳ ಜೊತೆ ಮಾತನಾಡಿದ ಕೇಜ್ರಿವಾಲ್.. ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇಕಡಾ 12ಕ್ಕೆ ಕುಸಿದಿದೆ. ಆದರೆ ಐಸಿಯು ಬೆಡ್​ನಲ್ಲಿರುವ ಸೋಂಕಿತರು ಇನ್ನೂ ಗುಣಮುಖವಾಗಿಲ್ಲ. ಹೀಗಾಗಿ ಸಿಟಿಯಲ್ಲಿರುವ ಎಲ್ಲಾ ಐಸಿಯು ಬೆಡ್​ಗಳು ಭರ್ತಿಯಾಗಿಯೇ ಇವೆ.

ಅಲ್ಲದೇ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತೆ ಸೋಂಕು ಹೆಚ್ಚಳವಾಗಬಹುದು ಅನ್ನೋದನ್ನ ಗಮನದಲ್ಲಿ ಇಟ್ಟುಕೊಂಡು ಮತ್ತಷ್ಟು ವ್ಯವಸ್ಥೆಗಳನ್ನ ಮಾಡಿಕೊಳ್ಳುತ್ತಿದೆ. ಹೊಸದಾಗಿ ಮತ್ತಷ್ಟು ಆಕ್ಸಿಜನ್ ಬೆಡ್ಸ್​ ಮತ್ತು ಆಕ್ಸಿಜನ್ ಸಿಲಿಂಡರ್ಸ್​ಗಳನ್ನ ಖರೀದಿ ಮಾಡುತ್ತಿದೆ ಎಂದರು.

ನೀವು ಅನಾಥರಲ್ಲ
ಇದೇ ವೇಳೆ ಮಹತ್ವದ ನಿರ್ಧಾರವನ್ನ ಪ್ರಕಟಿಸಿದ ಸಿಎಂ ಕೇಜ್ರಿವಾಲ್.. ಕೊರೊನಾ ಸೋಂಕಿನಿಂದ ಅನಾಥರಾದ ಮಕ್ಕಳಿಗೆ ನಮ್ಮ ಸರ್ಕಾರ ಉಚಿತ ಶಿಕ್ಷಣ ಮತ್ತು ಅವರ ಇತರೆ ವೆಚ್ಚಗಳನ್ನ ಭರಿಸಲಿದೆ. ಅಲ್ಲದೇ ಕೊರೊನಾದಿಂದ ಮೃತರ ಕುಟುಂಬಕ್ಕೆ ನಮ್ಮ ಸರ್ಕಾರ ಆರ್ಥಿಕ ಸಹಾಯ ನೀಡಲಿದೆ ಎಂದು ತಿಳಿಸಿದರು.

ನನಗೆ ಗೊತ್ತಿಗೆ ಹಲವು ಮಕ್ಕಳು ಕೊರೊನಾದಿಂದ ತಂದೆ-ತಾಯಿಗಳನ್ನ ಕಳೆದುಕೊಂಡಿದ್ದಾರೆ. ನಾನು ನಿಮ್ಮೊಂದಿಗೆ ಇರುತ್ತೇನೆ ಅಂತಾ ಸಂತ್ರಸ್ತರಿಗೆ ಹೇಳುತ್ತೇನೆ. ನೀವು ನಿಮ್ಮಷ್ಟಕ್ಕೆ ಅನಾಥ ಅಂತಾ ಭಾವಿಸಿಕೊಳ್ಳಬೇಡಿ. ನಮ್ಮ ಸರ್ಕಾರ ನಿಮ್ಮ ಶಿಕ್ಷಣ ಮತ್ತು ಪಾಲನೆಯ ಜವಾಬ್ದಾರಿಯನ್ನ ಮಾಡಲಿದೆ ಎಂದು ಭರವಸೆ ನೀಡಿದರು.

The post ಕೊರೊನಾದಿಂದ ಅನಾಥರಾದ ಮಕ್ಕಳ ಶಿಕ್ಷಣ, ಪಾಲನೆಯ ಹೊಣೆ ನಮ್ಮದು -ಕೇಜ್ರಿವಾಲ್ appeared first on News First Kannada.

Source: newsfirstlive.com

Source link