ದಾವಣಗೆರೆ: ಕೊರೊನಾ ಬಂದು ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಪಾಡು ಹೇಳತೀರದು. ಅಂತಹ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲು ದಾವಣಗೆರೆಯಲ್ಲಿ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗುರುಕುಲ ರೆಸಿಡೆನ್ಸಿಯಲ್ ಶಾಲೆ ಮುಂದಾಗಿದೆ.

ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಸಾಕಷ್ಟು ಮಕ್ಕಳಿದ್ದಾರೆ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಶಾಲಾ ಅಡಳಿತ ಮಂಡಳಿಯವರಾದ ನಸ್ರಿನ್ ಖಾನ್ ಹಾಗೂ ಅಬ್ದುಲ್ ಎನ್ನುವರು ಈ ನಿರ್ಧಾರ ಮಾಡಿದ್ದು, ಕೋವಿಡ್ ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ.

ಕೇವಲ ಯೂನಿಫಾರ್ಮ್, ಹಾಗೂ ಪುಸ್ತಕಗಳನ್ನು ಮಾತ್ರ ಕೊಂಡುಕೊಳ್ಳಲಿ ಉಳಿದ ಎಲ್ಲಾ ಶುಲ್ಕವನ್ನು ಶಾಲೆಯೇ ಭರಿಸುತ್ತಿದರ ಎಂದು ಶಾಲಾ ಅಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಪ್ರತಿಯೊಂದು ಶಾಲೆಯಲ್ಲಿ ಈ ರೀತಿ ನಿರ್ಧಾರ ಕೈಗೊಂಡರೆ ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಉಜ್ವಲವಾಗಲಿದ್ದು, ಗುರುಕುಲ ಶಾಲಾಯ ನಿರ್ಧಾರ ಸರ್ಕಾರವನ್ನೇ ನಾಚಿಸುವಂತಹ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಗುರುಕುಲ ಶಾಲೆಯ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

The post ಕೊರೊನಾದಿಂದ ಅನಾಥರಾದ 50 ಮಕ್ಕಳಿಗೆ ಫ್ರೀ ಎಜುಕೇಶನ್ – ಗುರುಕುಲ ರೆಸಿಡೆನ್ಸಿಯಲ್ appeared first on Public TV.

Source: publictv.in

Source link