ನವದೆಹಲಿ: ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿರುವ 9 ಸಾವಿರ ಮಂದಿಯಲ್ಲಿ ಬ್ಲಾಕ್​​ ಫಂಗಸ್​​ ಖಾಯಿಲೆ ದೃಢವಾಗಿದೆ. ಇದರ ನಡುವೆಯೇ ಕೋವಿಡ್​​ನಿಂದ ಆಸ್ಪತ್ರೆಗೆ ದಾಖಲಾದ ಸೋಂಕಿತರಲ್ಲಿ ರೋಗಿಗಳಲ್ಲಿ ಶೇಕಡಾ 3.6 ರಷ್ಟು ಮಂದಿಗೆ ಫಂಗಲ್​​, ಸೆಕೆಂಡರಿ ಬ್ಯಾಕ್ಟೀರಿಯಾ ಇನ್​​​ಫೆಕ್ಷನ್​ ಉಂಟಾಗಿದೆ ಎಂಬ ಮಾಹಿತಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ವರದಿಯಲ್ಲಿ ಬಹಿರಂಗಗೊಂಡಿದೆ.

10 ಆಸ್ಪತ್ರೆಗಳಿಂದ ಸಂಗ್ರಹಿಸಿದ ಮಾಹಿತಿಯಂತೆ ದ್ವಿತೀಯ ಸೋಂಕಿಗೆ ಒಳಗಾದ ರೋಗಿಗಳ ಸಾವಿನ ಸಂಖ್ಯೆ ಶೇಕಡಾ 56.7 ಕ್ಕೆ ಹೆಚ್ಚಳವಾಗಿದೆ. ಅದರಲ್ಲೂ 10 ಆಸ್ಪತ್ರೆಗಳ ಪೈಕಿ ಒಂದರಲ್ಲಿ ಸಾವಿನ ಪ್ರಮಾಣ ಶೇಕಡಾ 78.9 ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫಂಗಲ್​​, ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾದವರದಲ್ಲಿ ಶೇಕಡಾ 78 ರೋಗಿಗಳಿಗೆ ಆಸ್ಪತ್ರೆಯಲ್ಲೇ ಸೋಂಕು ಹರಡಿದೆ. ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ಬಳಿಕ ಸೋಂಕಿನ ಲಕ್ಷಣಗಳು ರೋಗಿಗಳಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಬಿಸಿ ವಾತಾವರಣದಲ್ಲಿ ಪಿಪಿಇ ಕಿಟ್​ ಧರಿಸುವುದರಿಂದ ಹಾಗೂ ಡಬಲ್​​ ಗ್ಲೋವಿಂಗ್​​​​ನಿಂದ ವಾತಾವರಣದ ನೈರ್ಮಲ್ಯ ಉತ್ತಮವಾಗಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ ಎಂದು ಐಸಿಎಂಆರ್​​ನ ಡಾ.ಕಾಮಿನಿ ವಾಲಿಯಾ ತಿಳಿಸಿದ್ದಾರೆ. ಇದರಿಂದ ಐಸೋಲೇಷನ್​ ಸೆಂಟರ್​​, ಕೋವಿಡ್​ ಕೇರ್​ ಸೆಂಟರ್​, ಆಸ್ಪತ್ರೆಗಳಲ್ಲಿನ ನೈರ್ಮಲ್ಯದ ಮೇಲೆ ಅನುಮಾನಗಳು ಮೂಡುವಂತೆ ಮಾಡಿದೆ.

ಫಂಗಸ್​ ಕಾಣಿಸಿಕೊಳ್ಳಲು ಕ್ಲೆಬ್ಸಿಲ್ಲಾ ನ್ಯುಮೋನಿಯಾ ಮತ್ತು ಅಸಿನೆಟೊಬ್ಯಾಕ್ಟರ್ ಬೌಮನ್ನಿ ಬ್ಯಾಕ್ಟೀರಿಯಾಗಳು ಪ್ರಮುಖ ಕಾರಣವಾಗಿದ್ದು, ಐಸಿಎಂಆರ್ ವರದಿಗಳ ಪ್ರಕಾರ ಸಾಮಾನ್ಯವಾಗಿ ಇ ಕೋಲಿ ಸಾಮಾನ್ಯ ರೋಗಕಾರಕವಾಗಿದೆ. ಎರಡು ಸೋಂಕುಗಳಿಗೆ ಚಿಕಿತ್ಸೆ ನೀಡುವುದು ಹೆಚ್ಚು ಕಷ್ಟ, ಅದರಲ್ಲೂ ಕೊರೊನಾ ಸೋಂಕಿಗೆ ಒಳಗಾದ ಬಳಿಕ ಚಿಕಿತ್ಸೆ ನೀಡುವುದು ಮತ್ತಷ್ಟು ಕಷ್ಟ. ಆದ್ದರಿಂದ ಆಸ್ಪತ್ರೆಗಳು ಸೋಂಕಿನ ನಿಯಂತ್ರಣಕ್ಕೆ ಹೆಚ್ಚು ಹೂಡಿಕೆ ಮಾಡಬೇಕು ಎಂದು ಕಾಮಿನಿ ವಾಲಿಯಾ ಹೇಳಿದ್ದಾರೆ.

The post ಕೊರೊನಾದಿಂದ ಆಸ್ಪತ್ರೆಗೆ ದಾಖಲಾದ ಶೇ.3.6 ಮಂದಿಗೆ ಫಂಗಸ್​​​, ಬ್ಯಾಕ್ಟೀರಿಯಾ ಇನ್ಫೆಕ್ಷನ್- ಬೆಚ್ಚಿಬೀಳಿಸಿದ ವರದಿ appeared first on News First Kannada.

Source: newsfirstlive.com

Source link