ಹಾವೇರಿ: ಕೊರೊನಾದಿಂದ ಚೇತರಿಸಿಕೊಂಡು ಮನೆಗೆ ವಾಪಸ್ ಆಗಿದ್ದ ತಾಯಿಯನ್ನು ಮಗ ಮನೆಗೆ ಸೇರಿಸದ ಕಾರಣ ಮನನೊಂದ ವೃದ್ಧ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಅಡಿವೆಕ್ಕ ಕಬ್ಬೂರು (75) ಮೃತಪಟ್ಟ ಮಹಿಳೆಯಾಗಿದ್ದು, ಹಾವೇರಿಯ ಹೊರವಲಯದ ಹೆಗ್ಗೇರಿ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತ ಅಡಿವೆಕ್ಕ ಕಬ್ಬೂರು ಅವರು ತಾಲೂಕಿನ ದೇವಿಹೋಸೂರು ಗ್ರಾಮದ ನಿವಾಸಿ ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು ಎಂಬ ಮಾಹಿತಿ ಲಭಿಸಿದೆ. ಆದರೆ ಮನೆಗೆ ವಾಪಸ್ ಆದ ಅವರನ್ನು ಪುತ್ರ, ನಿನಗೆ ಕೊರೊನಾ ಬಂದಿದೆ. ಮನೆ ಒಳಗೆ ಬರಬೇಡ ಹೊರಗೆ ನಿಲ್ಲು ಹೇಳಿ ಮನೆಗೆ ಸೇರಿಕೊಂಡಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಅಡಿವೆಕ್ಕ ಕಬ್ಬೂರು ಅವರು ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೆರೆಯಲ್ಲಿ ತೆಲುತ್ತಿದ್ದ ಮೃತದೇಹವನ್ನು ಹೊರ ತೆಗೆದ ವೇಳೆ ಅಡಿವೆಕ್ಕ ಕಬ್ಬೂರು ಮಗಳು ಮೃತದೇಹದ ಗುರುತು ಹಿಡಿದಿದ್ದಾರೆ. ಅಲ್ಲದೇ ತಾಯಿಯ ಸಾವಿಗೆ ಅಣ್ಣ ಹಾಗೂ ಅತ್ತಿಗೆಯೇ ಕಾರಣ ಎಂದು ಆರೋಪಿಸಿ ಕಣ್ಣೀರಿಟ್ಟಿದ್ದಾರೆ. ಹಾವೇರಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಡಿವೈಎಸ್‍ಪಿ ಶಂಕರ್ ಮಾರಿಹಾಳ, ಸಿಪಿಐ ಪ್ರಹ್ಲಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಕೊರೊನಾದಿಂದ ಚೇತರಿಸಿಕೊಂಡ್ರೂ ಮನೆಗೆ ಸೇರಿಸದ ಮಗ- ಕೆರೆಗೆ ಹಾರಿ ತಾಯಿ ಆತ್ಮಹತ್ಯೆ appeared first on News First Kannada.

Source: newsfirstlive.com

Source link