ಕೊರೊನಾ ಎರಡನೇ ಅಲೆಯ ಭೀಕರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಬ್ಬರಾದ ಮೇಲೆ ಒಬ್ಬರನ್ನ ನರಳುವಂತೆ ಮಾಡ್ತಿದೆ. ಒಂದ್ಕಡೆ ಉಸಿರಾಟದ ಸಮಸ್ಯೆಯಾದ್ರೆ, ಮತ್ತೊಂದು ಕಡೆ ಬೆಡ್​ ಸಿಗದೇ ನರಳಾಟ. ಇತ್ತಿಚೆಗಷ್ಟೆ ಸ್ಯಾಂಡಲ್​ವುಡ್​ನಲ್ಲಿ ಹಲವಾರು ನಟ, ನಿರ್ದೇಶಕರು, ನಿರ್ಮಾಪಕರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದೀಗ ಕನ್ನಡ ಚಿತ್ರರಂಗ ಕಂಡ ಕಲಾವಿದರಲ್ಲಿ ಒಬ್ಬರಾದ ಶಂಕನಾದ ಅರವಿಂದ್ ಕೊರೊನಾ ಕಾರಣ ಕೊನೆಯುಸಿರೆಳೆದಿದ್ದಾರೆ.

ಎರಡು ದಿನಗಳ ಹಿಂದೆ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದ ನಟ ಶಂಖನಾದ ಅರವಿಂದ್, ಇಂದು ಮಧ್ಯಾಹ್ನ ಉಸಿರಾಟದ ಸಮಸ್ಯೆಯಿಂದ ಇಹಲೋಕ ತ್ಯಜಿಸಿದ್ದಾರೆ. 250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕನಾದ ಅರವಿಂದ್, ಪೋಷಕ ಪಾತ್ರಗಳಿಗೆ ತಮ್ಮದೇ ಶೈಲಿಯ ನಟನೆಯ ಮೂಲಕ ಜೀವ ತುಂಬಿದ್ದರು. ಇವರ ಹಾಗೂ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದ ‘ಬೆಟ್ಟದ ಹೂ’ ಸಿನಿಮಾವಂತೂ, ಶಂಕನಾದ ಅರವಿಂದ್ ಹೆಸರು ಕೇಳಿದಾಕ್ಷಣ ಕಣ್ಣ ಮುಂದೆ ಹಾದು ಹೋಗುತ್ತೆ. ಅಂದ್ಹಾಗೇ, ದಿವಂಗತ ನಟ-ನಿರ್ದೇಶಕ ಕಾಶಿನಾಥ್‌ಗೆ ಶಂಕನಾದ ಅರವಿಂದ್ ಬಹಳ ಆಪ್ತರಾಗಿದ್ದರು.

The post ಕೊರೊನಾದಿಂದ ‘ಬೆಟ್ಟದ ಹೂ’ ಖ್ಯಾತಿಯ ನಟ ಶಂಖನಾದ ಅರವಿಂದ್ ನಿಧನ appeared first on News First Kannada.

Source: newsfirstlive.com

Source link