ಕೊಪ್ಪಳ: ಕೊರೊನಾ ಮೂರನೇ ಅಲೆಯು ಮಕ್ಕಳನ್ನು ಬಾಧಿಸುತ್ತದೆ ಎಂದು ತಮ್ಮ ಮಕ್ಕಳನ್ನು ರಕ್ಷಿಸಲು ಜನರು ಪೂಜೆ, ಪುನಃಸ್ಕಾರಗಳ ಮೊರೆ ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಜಂತಗಲ್‍ನಲ್ಲಿ ಕಂಡು ಬಂದಿದೆ. ಇದನ್ನೂ ಓದಿ: ಪ್ರೇಮ್ ಕುರಿತಾದ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ ರಕ್ಷಿತಾ

ಮಹಾಮಾರಿ ಕೊರೊನಾ ತಡೆಗೆ ವಿಜ್ಞಾನವೇ ಸರ್ವ ಪ್ರಯತ್ನ ಮಾಡುತ್ತಿದೆ. ಕೊರೊನಾ ಮೂರನೆಯ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂಬ ವರದಿ ಇದೆ. ಈ ವರದಿಯ ಆಧಾರದಲ್ಲಿ ಪಾಲಕರು ತಮ್ಮ ಮಕ್ಕಳನ್ನು ರಕ್ಷಿಸಿಸಿಕೊಳ್ಳಲು ಮೌಡ್ಯಾಚರಣೆಯ ಮೊರೆ ಹೋಗಿದ್ದಾರೆ. ಇಂದು ಮುಂಜಾನೆಯಿಂದ ಹಿರೇಜಂತಗಲ್‍ನಲ್ಲಿ ಕೊರೊನಾ ತಡೆಗೆ ಜನರು ಪೂಜೆಯನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

ಮಕ್ಕಳಿಗೆ ಕೊರೊನಾ ಬಾರದಿರಲಿ ಎಂದು ಮಕ್ಕಳಿಂದ ಪೂಜೆ ಮಾಡಿಸುತ್ತಿದ್ದಾರೆ. ದೇವಸ್ಥಾನದ ಮುಂದೆ ಮೈ ಮೇಲೆ ನೀರು ಹಾಕಿಕೊಂಡು ಒದ್ದೆ ಬಟ್ಟೆಯಲ್ಲಿ ದೇವರಿಗೆ ನೀರು ಹಾಕಿಸಿ ಹಿರೇಜಂತಗಲ್‍ನ ದ್ಯಾಮವ್ವ ದೇವಿಯ ಪಾದಗಟ್ಟೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಯಾರೋ ಸ್ವಾಮೀಜಿಗಳು ಪಾದಗಟ್ಟೆಗೆ ನೀರು ಹಾಕಲು ಹೇಳಿದ್ದಾರೆ ಎನ್ನುವ ಕಾರಣಕ್ಕೆ ನೀರು ಹಾಕಿಸಿ ಪೂಜೆ ಮಾಡುತ್ತಿದ್ದಾರೆ. ಇಂದು ಮಂಗಳವಾರವಾಗಿದ್ದರಿಂದ ಜನ ದೇವಿಗೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಲಾಕ್‍ಡೌನ್ ಮಧ್ಯೆಯೂ ಜನರು ಇಂಥಹ ಆಚರಣೆಗಳನ್ನು ಮುಂದುವರಿಸಿದ್ದಾರೆ.

The post ಕೊರೊನಾದಿಂದ ಮಕ್ಕಳನ್ನು ರಕ್ಷಿಸಲು ಪೂಜೆಯ ಮೊರೆ ಹೋದ ಜನರು appeared first on Public TV.

Source: publictv.in

Source link