ವಿಜಯಪುರ:  ಕೊರೊನಾ ಮಹಾಮಾರಿಯಿಂದ ಒಂದೇ ದಿನ‌ ಒಂದೇ ಗಂಟೆ ಅಂತರದಲ್ಲಿ ತಾಯಿ ಮಗ ಇಬ್ಬರೂ ಸಾವನ್ನಪ್ಪಿರೋ ದಾರುಣ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ‌ ಗ್ರಾಮದಲ್ಲಿ ನಡೆದಿದೆ. 54 ವರ್ಷದ ದಶರಥ ಮ್ಯಾಗೇರಿ ಹಾಗೂ 80 ವರ್ಷದ ಲಲಿತಾಬಾಯಿ ಮೃತರು.

ತಾಯಿ ಲಲಿತಾಬಾಯಿ ಅವರಿಗೆ ಅನಾರೋಗ್ಯ ಉಂಟಾಗಿದ್ದ ಕಾರಣ ಮಗ ದಶರಥ, ಅವರನ್ನ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಈ ವೇಳೆ ಮಗನಿಗೂ ಅನಾರೋಗ್ಯ ಕಾಡಿತ್ತು.  ಉತ್ತರಕನ್ನಡ ಜಿಲ್ಲೆಯ ಶಿರಸಿಯ ಪ್ರೌಢ ಶಾಲೆ ಶಿಕ್ಷಕರಾಗಿದ್ದ ದಶರಥ ಮ್ಯಾಗೇರಿ ಕೊರೊನಾ ಸೋಂಕಿನಿಂದ ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದ್ದರು. ಮಗನ‌‌ ಸಾವಿನ‌ ಸುದ್ದಿ ತಿಳಿದು ಇತ್ತ ವಿಜಯಪುರದಲ್ಲಿ ತಾಯಿ ಲಲಿತಾಬಾಯಿ ಕೂಡ ಸಾವನ್ನಪ್ಪಿದ್ದಾರೆ.

ಈ ಮೂಲಕ ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದು, ಇಬ್ಬರನ್ನೂ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

 

The post ಕೊರೊನಾದಿಂದ ಮಗ ಸಾವು, ಸುದ್ದಿ ಕೇಳಿ ಒಂದೇ ಗಂಟೆಯಲ್ಲಿ ತಾಯಿಯೂ ನಿಧನ appeared first on News First Kannada.

Source: newsfirstlive.com

Source link