ಲಂಡನ್​: ಕೊರೊನಾ.. ಸದ್ಯ, ವಿಶ್ವಕ್ಕೇ ಎದುರಾಗಿರುವ ಬಹು ದೊಡ್ಡ ಸವಾಲು.. ಮಹಾಮಾರಿ ಆರ್ಭಟ ತಡೆಯುವ ಸಲುವಾಗಿ ವೈದ್ಯಲೋಕ ಹಗಲಿರುಳು ಶ್ರಮಿಸುತ್ತಿದೆ. ಈ ಮಧ್ಯೆ ವೈರಸ್​​ನ​ ವಿಷವರ್ತುಲ ತನ್ನ ರೂಪಾಂತರಿತ ಅವತಾರಗಳ ಮೂಲಕ ಮತ್ತಷ್ಟು ಕಂಟಕಪ್ರಾಯವಾಗಿದೆ. ಅದರಲ್ಲೂ ಭಾರತದಲ್ಲಿ ಮೊದಲು ಪತ್ತೆಯಾಯ್ತು ಅಂತ ಹೇಳಲಾದ ಡೆಲ್ಟಾ ತಳಿ ಬ್ರಿಟನ್​ನಲ್ಲಿ ಈಗ ಮತ್ತೆ ಭೀತಿ ತಂದಿದೆ. ಈ ನಡುವೆ ಇಂಡಿಯಾದಲ್ಲೂ ಮತ್ತೊಂದು ರೂಪಾಂತರಿ ಪತ್ತೆಯಾಗಿದೆ.

ಯೆಸ್​, ಬ್ರಿಟನ್​ನಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರ್ತಾ ಇತ್ತು. ಥೇಮ್ಸ್ ನದಿಯ ದಂಡೆಯ ಮೇಲಿನ ಸುಂದರ ನಗರ ಲಂಡನ್​ನಲ್ಲಿ ನಿಧಾನವಾಗಿ ವ್ಯಾಪಾರ-ವ್ಯವಹಾರ, ಪಬ್-ಕ್ಲಬ್ ಎಲ್ಲಾ ಓಪನ್ ಆಗ್ತಾ ಇದ್ವು. ಆದ್ರೆ ಅಷ್ಟರಲ್ಲೇ ಬ್ರಿಟನ್​ಗೆ ಮತ್ತೊಂದು ಆತಂಕ ಶುರುವಾಗಿದೆ. ಈ ಆತಂಕ ತರ್ತಾ ಇರೋದೇ ಡೆಲ್ಟಾ. ಡೆಲ್ಟಾ ಕಾರಣದಿಂದಾಗಿ ಇಂಗ್ಲೆಂಡ್​ನಲ್ಲಿ ಇದೀಗ ಮತ್ತೆ ಹಲವು ಕಡೆ ನಿರ್ಬಂಧ ವಿಸ್ತರಿಸಲು ಸರ್ಕಾರ ತೀರ್ಮಾನಿಸ್ತಾ ಇದೆ. ಇದು ಎಷ್ಟರ ಮಟ್ಟಿಗೆ ಭೀತಿ ಹುಟ್ಟಿಸಿದೆ ಅಂದ್ರೆ ಇದರ ಪರಿಣಾಮವೇ ಅಷ್ಟರ ಮಟ್ಟಿಗಿದೆ. ಇಡೀ ಜಗತ್ತಿಗೇ ಕವಿದಿರುವ ಕೊರೊನಾ ಕಾರ್ಮೋಡವನ್ನ ಸರಿಸುವ ಹೊತ್ತಿನಲ್ಲೇ ಮಹಾಮಾರಿಯ ತಳಿಗಳ ಅಬ್ಬರ ವಿಶ್ವದ ನಿದ್ದೆಗೆಡಿಸಲಾರಂಭಿಸಿದೆ.

ಕೊರೊನಾಗೆ ಮೂಗುದಾರ ಹಾಕಲು ಲಾಕ್​ಡೌನ್​ ಮೊರೆ ಹೋಗಿರುವ ಬ್ರಿಟನ್​ಗೆ ಡೆಲ್ಟಾ ಶಾಕ್​ ಕೊಟ್ಟಿದೆ. ಸದ್ಯ, ಬ್ರಿಟನ್​​ನಲ್ಲಿ ದಾಖಲಾಗ್ತಿರುವ ಕೊರೊನಾ ಪ್ರಕರಣದಲ್ಲಿ ಶೇಕಡಾ 90ಕ್ಕೂ ಅಧಿಕ ಡೆಲ್ಟಾ ಪ್ರಕರಣಗಳೇ ಪತ್ತೆಯಾಗುತ್ತಿವೆ. ಇನ್ನು, ಪ್ರತೀ 9 ದಿನಗಳಿಗೊಮ್ಮೆ ಡೆಲ್ಟಾ ಪ್ರಕರಣಗಳು ದುಪ್ಪಟ್ಟಾಗುತ್ತಿದ್ದು, ಜೂನ್​ 21ರ ವೇಳೆಗೆ ಲಾಕ್​ಡೌನ್​ ತೆರವುಗೊಳಿಸುವ ನೀರೀಕ್ಷೆಯಲ್ಲಿದ್ದ ಪ್ರಧಾನಿ ಬೋರಿಸ್​ ಜಾನ್ಸನ್​ಗೆ ತಲೆನೋವು ಶುರುವಾಗಿದೆ.

The post ಕೊರೊನಾದಿಂದ ಮುಕ್ತವಾಗ್ತಿದ್ದ ಬ್ರಿಟನ್​ಗೆ ಆತಂಕ: ದೇಶದಲ್ಲಿ ಕಾಲಿಟ್ಟಿದೆ ‘ಡೆಲ್ಟಾ’ appeared first on News First Kannada.

Source: newsfirstlive.com

Source link