ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ವೈದ್ಯರು ಮತ್ತು ಫ್ರಂಟ್​ಲೈನ್​ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದವರನ್ನ ನೆನೆದು ಕ್ಷಣಕಾಲ ಭಾವುಕರಾದ ಸನ್ನಿವೇಶ ನಡೆಯಿತು.

ವೈದ್ಯರು, ಫ್ರಂಟ್​ಲೈನ್​ ವರ್ಕರ್​​​ಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ..  ಈ ಕೊರೊನಾ ಸಮಯದಲ್ಲಿ ವೈದ್ಯರು, ನರ್ಸ್​​ಗಳು, ಆ್ಯಂಬುಲೆನ್ಸ್ ಡ್ರೈವರ್​ಗಳು ಸೇರಿದಂತೆ ಫ್ರಂಟ್​ಲೈನ್ ವಾರಿಯರ್​ಗಳು ಮಾಡಿರುವ ಕೆಲಸ ಶ್ಲಾಘನೀಯ. ಹೀಗಿದ್ದರೂ ಮಹಾಮಾರಿ ಎಷ್ಟು ದೊಡ್ಡದೆಂದರೆ ನಿಮ್ಮ ನಿರಂತರ ಶ್ರಮ ಹಾಗೂ ಕರ್ತವ್ಯ ಪಾಲನೆಯ ನಡುವೆಯೂ ನಾವು ನಮ್ಮ ಪರಿವಾರದ ಕೆಲವು ಸದಸ್ಯರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದರು.

ಈ ವೈರಸ್​ ನಮ್ಮವರನ್ನ ನಮ್ಮಿಂದ ಕಿತ್ತುಕೊಳ್ತು. ನಾನು ಅವರೆಲ್ಲರಿಗೂ ವಿನಮ್ರ ಶ್ರದ್ಧಾಂಜಲಿಯನ್ನು ಕೋರುತ್ತೇನೆ. ಮತ್ತು ಅವರ ಸಂಬಂಧಿಕರಿಗೆ ಸಾಂತ್ವನ ಹೇಳುತ್ತೇನೆ ಎಂದು ಹೇಳುತ್ತಾ ಗದ್ಗದಿತರಾದರು.

The post ಕೊರೊನಾದಿಂದ ಮೃತಪಟ್ಟವರನ್ನ ನೆನೆದು ಭಾವುಕರಾಗಿ ಕ್ಷಣಕಾಲ ಮೌನಕ್ಕೆ ಶರಣಾದ ಮೋದಿ appeared first on News First Kannada.

Source: newsfirstlive.com

Source link