ಬೆಂಗಳೂರು: ಸಹಕಾರ ಸಚಿವ ಎಸ್​​ಟಿ ಸೋಮಶೇಖರ್​ ಅವರು ತಮ್ಮ ಕ್ಷೇತ್ರದಲ್ಲಿ ಕೊರೊನಾಗೆ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ನೀಡುವ ಕಾರ್ಯವನ್ನ ಮುಂದುವರಿಸಿದ್ದಾರೆ. ಅದರಂತೆ ಇಂದು ಹೇರೋಹಳ್ಳಿ ವಾರ್ಡ್‌ನಲ್ಲಿ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಕೆಂಗೇರಿ ವಾರ್ಡ್‌ನಲ್ಲಿ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಸೋಮಶೇಖರ್ ಪರಿಹಾರವನ್ನ ವಿತರಿಸಿದರು. ಎಸ್​ಟಿ ಸೋಮಶೇಖರ್ ಅವರು ತಮ್ಮ ವೈಯಕ್ತಿಕ ಖಾತೆಯಿಂದ ಈ ಪರಿಹಾರ ನೀಡುತ್ತಿದ್ದಾರೆ. ಇದುವರೆಗೆ ಕೊರೊನಾದಿಂದ ಸಾವನ್ನಪ್ಪಿದವರ 24 ಕುಟುಂಬಗಳಿಗೆ ಎಸ್​ಟಿ ಸೋಮಶೇಖರ್ ಪರಿಹಾರವನ್ನ ನೀಡಿದ್ದಾರೆ.

 

The post ಕೊರೊನಾದಿಂದ ಮೃತರಾದ ಕುಟುಂಬಕ್ಕೆ ₹1 ಲಕ್ಷ ಪರಿಹಾರ ವಿತರಿಸಿದ ST ಸೋಮಶೇಖರ್ appeared first on News First Kannada.

Source: newsfirstlive.com

Source link