ಮುಂಬೈ: ಕೊರೊನಾದಿಂದಾಗಿ ಮೃತಪಟ್ಟ ರೋಗಿಯೊಬ್ಬರ ಜೇಬಿನಲ್ಲಿದ್ದ 35 ಸಾವಿರ ರೂಪಾಯಿ ಹಣವನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಕದ್ದಿರುವ ಘಟನೆ ಮಹಾರಾಷ್ಟ್ರದ ಧುಲೇ ಎಂಬಲ್ಲಿ ವರದಿಯಾಗಿದೆ.

ಕೊರೊನಾ ಸೋಂಕಿನಿಂದ ವ್ಯಕ್ತಿಯೊಬ್ಬರು ಮುಂಬೈ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮರಣ ಹೊಂದಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ನಾಲ್ಕು ಜನ ಸಿಬ್ಬಂದಿ ಸೇರಿಕೊಂಡು ಮೃತ ವ್ಯಕ್ತಿಯ ಜೇಬಿನಿಂದ ಹಣದ ಕಟ್ಟನ್ನು ತೆಗೆಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕ್ಯಾಮೆರಾದಲ್ಲಿ ನಾಲ್ಕು ಜನ ಯುವಕರು ಒಂದು ಕೊಠಡಿಯಲ್ಲಿ ಮೃತ ವ್ಯಕ್ತಿಯನ್ನು ಮೇಲಕ್ಕೆತ್ತಿ ಸ್ಟ್ರೆಚ್ಚರ್‍ನಲ್ಲಿ ಮಲಗಿಸಿ ಬಾಗಿಲು ಹಾಕುತ್ತಾರೆ. ಈ ವೇಳೆ ಯಾರೋ ಬಾಗಿಲನ್ನು ಹೊರಭಾಗದಿಂದ ತಳ್ಳುತ್ತಾರೆ. ನಂತರ ಪುನಃ ಗಟ್ಟಿಯಾಗಿ ಬಾಗಿಲು ಹಾಕಿ ಮೃತ ವ್ಯಕ್ತಿಯ ಜೇಬಿನಿಂದ ಹಣವನ್ನು ಎಗರಿಸುತ್ತಾರೆ. ಈ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದ ಮೂಲಕ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ರೋಗಿಯ ಜೇಬಿನಲ್ಲಿ 35 ಸಾವಿರ ರೂಪಾಯಿ ಇತ್ತು ಎಂದು ವರದಿಯಾಗಿದೆ.

The post ಕೊರೊನಾದಿಂದ ಮೃತ ರೋಗಿಯ ಜೇಬಿನಿಂದ ಹಣ ಕದ್ದ ಆಸ್ಪತ್ರೆ ಸಿಬ್ಬಂದಿ appeared first on Public TV.

Source: publictv.in

Source link