ಧಾರವಾಡ: ಕೊರೊನಾದಿಂದ ಸಾವನ್ನಪ್ಪಿದವರ ಆತ್ಮ ತೃಪ್ತಿಯಾಗಲು ಮತ್ತು ಸದ್ಗತಿ ಹೊಂದಲೆಂದು ತ್ರಿಮತಸ್ಥರು ಹೋಮ ಹವನ ಮಾಡಿದ್ದಾರೆ.

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಎಷ್ಟೋ ಜನರಿಗೆ ಸರಿಯಾದ ಅಂತ್ಯಸಂಸ್ಕಾರ ಕೂಡಾ ನಡೆದಿಲ್ಲ. ಮಕ್ಕಳಿಗೆ ತಮ್ಮ ತಂದೆ ತಾಯಿಯ ಹಾಗೂ ತಂದೆ ತಾಯಿಗಳಿಗೆ ತಮ್ಮ ಮಕ್ಕಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಧಾರವಾಡ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಆತ್ಮತೃಪ್ತಿಗಾಗಿ ಹಾಗೂ ಅವರು ಸದ್ಗತಿ ಹೊಂದಲಿ ಎಂಬ ಉದ್ದೇಶದಿಂದ ಹೋಮವನ್ನು ಮಾಡಲಾಯಿತು. ಇದನ್ನೂ ಓದಿ: ವಿಷ ಕುಡಿತೀನಿ, ಕೋವಿಡ್ ಕೇರ್ ಸೆಂಟರ್‌ಗೆ ಮಾತ್ರ ಬರಲ್ಲ- ಸೋಂಕಿತನ ರಾದ್ಧಾಂತ

ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಮಧ್ವಾಚಾರ್ಯ, ಶಂಕಾರಾಚಾರ್ಯ, ವೈಷ್ಣವ ಪರಂಪರೆಯರು ಸೇರಿ ಈ ಹೋಮ ಮಾಡಿದ್ದಾರೆ. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಗತ್ ಕಲ್ಯಾಣಕ್ಕಾಗಿ ಈ ಹೋಮ ಮಾಡಲಾಯಿತು. ಈ ಹೋಮಕ್ಕೆ ಹಲವು ಮಠಾಧೀಶರು ಕೂಡಾ ಸಮ್ಮತಿ ಸೂಚಿಸಿದ್ದರು.

ಲೋಕ ಕಲ್ಯಾಣವಾಗಲಿ ಹಾಗೂ ಈ ಸೋಂಕು ಬೇಗನೇ ತೊಲಗಲಿ ಎಂಬ ಉದ್ದೇಶದಿಂದ ಸುಮಾರು 4 ಗಂಟೆಗಳ ಕಾಲ ಹೋಮವನ್ನು ಮಾಡಲಾಯಿತು. ಇದನ್ನೂ ಓದಿ: ಡಾ.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ -ಡಿಸಿಎಂ

The post ಕೊರೊನಾದಿಂದ ಸಾವನ್ನಪ್ಪಿದವರ ಸದ್ಗತಿಗಾಗಿ ತ್ರಿಮತಸ್ಥರಿಂದ ಹೋಮ appeared first on Public TV.

Source: publictv.in

Source link