ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು.. ಇಡೀ ದೇಶ ಎರಡನೇ ಅಲೆಯ ಕೊರೊನಾದಿಂದ ಬಹಳ ನೊಂದಿದೆ. ಸಾವು ನೋವು ಉದ್ಯೋಗ ಕಳೆದುಕೊಂಡವರು, ಆರೋಗ್ಯ ಕಳೆದುಕೊಂಡವರು, ಆರ್ಥಿಕವಾಗಿ ಎಲ್ಲ ವರ್ಗದ ಜನರಿಗೂ ಅಪಾಯ ಆಗಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ವತಿಯಿಂದ ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಪ್ಯಾಕೇಜ್​ಗೆ ಒತ್ತಾಯ ಮಾಡಿದ್ದೆವು. 20 ಲಕ್ಷ ಕೋಟಿ ರೂಪಾಯಿ ಯಾರಿಗೆ ಸಿಕ್ತು, ಯಾರಿಗೆ ಸಿಗಲಿಲ್ಲ ಪಟ್ಟಿ ಕೊಡಿ ಅಂದೆವು. ಹೋದ ವರ್ಷ ರಾಜ್ಯದ ಪ್ಯಾಕೇಜ್ ಡೀಟೈಲ್ಸ್ ಕೂಡ ಕೇಳಿದೆವು. ಈ ಬಗ್ಗೆ ಕಾಂಗ್ರೆಸ್ ಆರ್ಟಿಐ ಮೂಲಕ ಮಾಹಿತಿ ಪಡೆದು ಬಿಡುಗಡೆ ಮಾಡಿದೆ ಎಂದಿದ್ದಾರೆ.

ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿಯ ಮುಖ್ಯಾಂಶಗಳು..

  • ಡೆತ್ ಆಡಿಟ್ ಬಗ್ಗೆ ಮಾಹಿತಿ ಕೇಳಿದರೆ ಸರ್ಕಾರ ಇನ್ನೂ‌ ಮಾಡಿಸಿಲ್ಲ.. ಒಂದು‌ ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ, ಯಾರ್ಯಾರಿಗೆ ಅನ್ನೋ ಸ್ಪಷ್ಟನೆ ಇಲ್ಲ.
  • ಕೇಂದ್ರ ಸರ್ಕಾರ ನಾಲ್ಕು ಲಕ್ಷ ಕೊಡೋದಾಗಿ ಹೇಳಿ ಎಂಟೇ ಗಂಟೆಯಲ್ಲಿ ಆ ಆದೇಶ ವಾಪಸ್ ಪಡೆದಿದೆ. ಆಕ್ಸಿಜನ್ ಸಿಗದೇ ಸತ್ತವರ ಸಂಖ್ಯೆ ಈಗ ಡಿಕ್ಲೇರ್ ಮಾಡಿರೋದಕ್ಕಿಂತ ಒಂದಕ್ಕೆ ಐದರಷ್ಟು ಹೆಚ್ಚಿದೆ. ಡೆತ್ ಆಡಿಟ್ ಮಾಡ್ತೇವೆ ಅಂತ ಹೇಳಿದ ಸಿಎಂ ಈ ಬಗ್ಗೆ ಆದೇಶ ಹೊರಡಿಸಿಲ್ಲ.
  • ಕಾಂಗ್ರೆಸ್ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನೊಂದ ಜನರಿಗೆ, ಜೀವ ಜೀವನ ಕಳೆದುಕೊಂಡವರ ಮುಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಎಐಸಿಸಿ ಕೂಡ ಇಡೀ ರಾಷ್ಟ್ರದ ವ್ಯಾಪ್ತಿಯಲ್ಲಿ ಒಂದು ತಿಂಗಳ ಅಭಿಯಾನ ನಡೆಸಲು ಮಾರ್ಗದರ್ಶನ ಮಾಡಿದೆ. ಡಿಸಿಸಿ ಅಧ್ಯಕ್ಷರು ಹಾಗೂ ಶಾಸಕರು, ಮಾಜಿ ಶಾಸಕರಿಗೆ ಈ ಕಾರ್ಯಕ್ರಮದ ವಿವರಣೆ ನೀಡಲಿದ್ದೇನೆ.

ಕಾಂಗ್ರೆಸ್ ಕಾರ್ಯಕರ್ತರಿಂದಲೇ ಡೆತ್ ಆಡಿಟ್

  1. ಕೊರೊನಾದಿಂದ ಸತ್ತವರ ಡೆತ್ ಆಡಿಟ್ ಮಾಡಿಸಲು ಕಾಂಗ್ರೆಸ್ ಮುಂದಾಗಿದ್ದು ಕೋವಿಡ್​ನಿಂದ ಸತ್ತವರ ಅಂಕಿ ಅಂಶ ಕಲೆ ಹಾಕುವಂತೆ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ. ಕೋವಿಡ್ ನಿಂದ ನೊಂದವರು, ಸಂಕಷ್ಟಕ್ಕೆ ಈಡಾದವರ ಅಂಕಿ ಅಂಶ ಕಲೆ ಹಾಕಲು ತೀರ್ಮಾನ ಮಾಡಲಾಗಿದೆ. ಕಾಂಗ್ರೆಸ್ ಕೋವಿಡ್ ವಾರಿಯರ್ಸ್ ಮೂಲಕ ಡೆತ್ ಆಡಿಟ್ ನಡೆಸಲು ತೀರ್ಮಾನವಾಗಿದೆ. ಉದ್ಯೋಗ ಕಳೆದುಕೊಂಡಿದ್ದರೆ ಅವರ ಜೊತೆ ಮಾನಸಿಕವಾಗಿ ಜೊತೆ ನಿಲ್ಲುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತದೆ ಎಂದಿದ್ದಾರೆ.
  2. ದೆಹಲಿಯಿಂದ ಇದಕ್ಕೆ ಮಾರ್ಗದರ್ಶನವಿದೆ‌.. ಪಂಚಾಯತಿಯಿಂದ ಪಾರ್ಲಿಮೆಂಟ್​ವರೆಗೂ ಈ ಕೆಲಸ ಆಗುತ್ತದೆ. ಪ್ರತಿ ತಾಲೂಕಿಗೂ 30 ಜನರ ಟೀಮ್‌ ಮಾಡಲಾಗುತ್ತದೆ. ಕೋವಿಡ್​ನಿಂದ ಸಂಕಷ್ಟಕ್ಕೀಡಾದ ಜನರ ಜೊತೆ ನಿಲ್ಲುವ ಕೆಲಸವನ್ನ ಕಾಂಗ್ರೆಸ್ ಮಾಡಲಿದೆ.
  3. ಸರ್ಕಾರ ಸುಮಾರು 30 ಸಾವಿರ ಜನ ಕೋವಿಡ್​ನಿಂದ ಸತ್ತಿದ್ದಾರೆ ಎಂದಿದೆ. ಆದರೆ ಒಂದು ಲಕ್ಷದ ಇಪ್ಪತ್ತು ಸಾವಿರ ಜನ ಸತ್ತಿರುವ ಬಗ್ಗೆ ಡೆತ್ ಸರ್ಟಿಫಿಕೇಟ್ ಈಗಾಗಲೇ ನೀಡಲಾಗಿದೆ. ಆದರೆ ಅದರಲ್ಲಿ ಕೋವಿಡ್​ನಿಂದ ಸಾವು ಎಂದು ನಮೂದಿಸಿಲ್ಲ. ಹೀಗಾಗಿ ಅವರಿಗೆ ಪರಿಹಾರ ಸಿಗಲ್ಲ.. ಅಂತವರಿಗೆ ಸಹಾಯಹಸ್ತ ನೀಡಲು ಈ ಕಾರ್ಯಕ್ರಮ ರೂಪಿಸಿದ್ದೇವೆ.
  4. ಈ ರಾಜ್ಯದ ಸಿಎಂ ಒಂದೇ ಒಂದು ದಿನ ಫ್ರೀ ವ್ಯಾಕ್ಸಿನ್ ಕೊಡಬೇಕು ಅಂತ ಒತ್ತಾಯ ಮಾಡಲಿಲ್ಲ.. ಒಬ್ಬ ಬಿಜೆಪಿ ಎಂಪಿ ಕೂಡ ಈ ಬಗ್ಗೆ ದನಿ ಎತ್ತಲಿಲ್ಲ. ಈ‌ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ.. ನ್ಯಾಯಾಲಯ ನಮ್ಮ ಬೆಂಬಲಕ್ಕೆ ಬಂತು.
  5. ಇದೇ ವೇಳೆ ಜುಲೈ ಒಂದರಿಂದ ಮೂವತ್ತರವರೆಗೂ ಡೆತ್ ಆಡಿಟ್ ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
  6. ಮುಂದಿನ ಮುಖ್ಯಮಂತ್ರಿ ವಿವಾದ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್.. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಎಂದ. ಪಾಪ ಅಶೋಕ್ ಮೊದಲು ಅವರ ತಟ್ಟೆಯಲ್ಲಿರೋ ಹೆಗ್ಗಣ ತೆಗೆದು ಹಾಕಲಿ, ನಂತರ ಬೇರೆಯವರ ಬಗ್ಗೆ ಮಾತಾಡಲಿ.. ಎಂದು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ವೀಕ್ ಎಂದ ಅಶೋಕ್​ಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

The post ಕೊರೊನಾದಿಂದ ಸಾವನ್ನಪ್ಪಿದವರ ಡೆತ್ ಆಡಿಟ್ ನಡೆಸಲು ಕಾರ್ಯಕರ್ತರಿಗೆ ಡಿಕೆಎಸ್​ ಕರೆ appeared first on News First Kannada.

Source: newsfirstlive.com

Source link