ನವದೆಹಲಿ: ಕೊರೊನಾ ಸೋಂಕಿನಿಂದ ದೊಡ್ಡಮಟ್ಟದಲ್ಲಿ ಸಾವುನೋವುಗಳು ಸಂಭವಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಕೊರೊನಾ ಸೋಂಕಿನ ಅಂಕಿ-ಅಂಶಗಳನ್ನ ವರದಿ ಮಾಡುತ್ತಿರುವ ವರ್ಲ್ಡೋಮೀಟರ್​ ವೆಬ್​ಸೈಟ್ ಪ್ರಕಾರ ಜಗತ್ತಿನಾದ್ಯಂತ ಈವರೆಗೆ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 34,46,924. ಆದ್ರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಹೊಸ ಲೆಕ್ಕವೊಂದನ್ನ ಹೇಳುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ 6 ರಿಂದ 8 ಮಿಲಿಯನ್. ಅಂದ್ರೆ 60 ರಿಂದ 80 ಲಕ್ಷ. ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಅಸಿಸ್ಟೆಎಂಟ್ ಡೈರೆಕ್ಟರ್ ಜನರಲ್ ಸಮೀರಾ ಆಸ್ಮಾ.. ಒಂದು ಲೆಕ್ಕಾಚಾರದ ಪ್ರಕಾರ ಜಗತ್ತಿನಾದ್ಯಂತ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 3.4 ಮಿಲಿಯನ್ ಅಂದ್ರೆ ಸುಮಾರು 34 ಲಕ್ಷ. ಆದ್ರೆ ಈ ಸಂಖ್ಯೆ ನಿಜವಾಗಿ ಮೂರರಿಂದ ನಾಲ್ಕು ಪಟ್ಟು ಹೆಚ್ಚಿರಬಹುದು. ನನ್ನ ಪ್ರಕಾರ ಜಗತ್ತಿನಾದ್ಯಂತ ಸುಮಾರು 60 ರಿಂದ 80 ಲಕ್ಷ ಮಂದಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.

The post ಕೊರೊನಾದಿಂದ ಸಾವನ್ನಪ್ಪಿರುವುದು 34 ಲಕ್ಷವಲ್ಲ.. 60-80 ಲಕ್ಷ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ WHO appeared first on News First Kannada.

Source: newsfirstlive.com

Source link