ಕೊರೊನಾ ಬಗ್ಗು ಬಡಿಯಲು ತಂದ ಲಾಕ್​​ಡೌನ್ ಅಸ್ತ್ರ ಯಶಸ್ವಿಯಾದಂತೆ ಕಾಣ್ತಿದೆ. ಯಾಕೆಂದ್ರೆ, ಬೆಂಗಳೂರು ನಗರದಲ್ಲಿ ಸೋಂಕಿತರಿಗಿಂತ ಡಿಸ್ಚಾರ್ಜ್​ ಆಗುವವರ ಸಂಖ್ಯೆಯೇ ಹೆಚ್ಚಿದೆ. ಇದಕ್ಕೆ ಸಾಕ್ಷಿಯಂತೆ ಆರೋಗ್ಯ ಇಲಾಖೆ ಪ್ರಕಟಿಸಿರೋ ಅಂಕಿ-ಅಂಶ ಸಿಲಿಕಾನ್ ಮಂದಿಯಲ್ಲಿ ನಗು ತರಿಸಿದೆ.

ಮಹಾನಗರಿ ಬೆಂಗಳೂರು. ಒಂದಾನೊಂದು ಕಾಲದಲ್ಲಿ ತುಂಬಿ ತುಳುಕುತ್ತಿದ್ದ ನಗರವಿದು. ರಸ್ತೆಗಳ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ಸೇರ್ತಿದ್ರು. ಆದ್ರೀಗ ಯಾವಾಗ ಹೆಮ್ಮಾರಿ ನಗರಕ್ಕೆ ಕಾಲಿಟ್ತೋ ಜನ ರಾಜಧಾನಿಯನ್ನ ತೊರೆದು ತಮ್ಮ ಊರುಗಳನ್ನ ಸೇರಿಯೇಬಿಟ್ರು. ಲಾಕ್​​ಡೌನ್​ನಿಂದಂತೂ ರಸ್ತೆಗಳಲ್ಲಿ ವಾಹನಗಳ ಓಡಾಟವಿಲ್ಲದೇ ಖಾಲಿ ಖಾಲಿಯಾಗಿದೆ. ಅಷ್ಟರ ಮಟ್ಟಿಗೆ ಬೆಂಗಳೂರಲ್ಲಿ ಕ್ರೂರಿ ಕೊರೊನಾ ಆರ್ಭಟ ಜೋರಾಗಿತ್ತು.

ಇದೀಗ ರಾಜ್ಯ ರಾಜಧಾನಿ ಮಂದಿ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಮುಖ್ಯ ಕಾರಣ,  ಕೊರೊನಾದಿಂದ ರಿಕವರಿ ಆಗುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದ್ದು.

ಪಾಸಿಟಿವ್ ರೇಟ್​ಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಳ

ಕಳೆದ 6 ದಿನಗಳಿಂದ ಹೆಚ್ಚಿನ ಸೋಂಕಿತರು ಗುಣಮುಖ

ಯೆಸ್, ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪಾಸಿಟಿವ್ ರೇಟ್​ಗಿಂತ ಗುಣಮುಖರಾಗುವರ ಸಂಖ್ಯೆಯಲ್ಲಿ  ಹೆಚ್ಚಳವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ 6 ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ನಿರಂತರವಾಗಿ ಗುಣಮುಖರಾಗ್ತಿರೋರ ಬಗ್ಗೆ ಆರೋಗ್ಯ ಇಲಾಖೆ ಅಂಕಿ-ಅಂಶಗಳನ್ನ ಸಹ ಬಿಡುಗಡೆಗೊಳಿಸಿದೆ.

ಗುಣಮುಖರಾಗಿರುವವರ ಅಂಕಿ ಅಂಶ

ದಿನಾಂಕ – ಪಾಸಿಟಿವ್ ರೇಟ್ – ಗುಣಮುಖ ಕೇಸ್ – ಸಾವು

ಮೇ 24 – 5699 – 34378 – 297

ಮೇ 25 – 6243 – 13210 – 350

ಮೇ 26 – 6433 – 18342 – 285

ಮೇ 27 – 5949 –  6643 – 273

ಮೇ 28 – 5736 – 31237 – 192

ಮೇ 29 – 4889 – 21126 – 278

ಒಟ್ನಲ್ಲಿ, ಕಳೆದ 6 ದಿನಗಳ ಬೆಂಗಳೂರಿನ ಕೊರೊನಾ ಚಿತ್ರಣ ನೋಡಿದ್ರೆ, ನಿತ್ಯ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವ್ರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಇದೇ ರೀತಿ ನಗರದಲ್ಲಿ ಮುಂದಿನ ಎರಡು ವಾರಗಳ ಕಾಲ ಮುಂದುವರೆದ್ರೆ, ಸದ್ಯ ನಗರದಲ್ಲಿರೋ ಆಕ್ಟೀವ್​ ಕೇಸ್​ಗಳು ನಿರೀಕ್ಷೆಗೂ ಮೀರಿ ಇಳಿಕೆಯಾಗೋದ್ರಲ್ಲಿ ಅನುಮಾನವೇ ಇಲ್ಲ.

The post ಕೊರೊನಾವನ್ನ ಬಗ್ಗು ಬಡಿಯಿತಾ ಲಾಕ್​ಡೌನ್ ಅಸ್ತ್ರ..? ಇಲ್ಲಿದೆ ನೋಡಿ ಅಂಕಿ-ಅಂಶ appeared first on News First Kannada.

Source: newsfirstlive.com

Source link