ಬೆಂಗಳೂರು: ರಾಜ್ಯದಲ್ಲಿ ಧಾರವಾಡ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಬಗ್ಗೆ ಜಾಗೃತಿ ವಹಿಸಲು ಕ್ರಮ ವಹಿಸಿದ್ದೇವೆ. ಯಾವ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಲಹೆ ಪಡೆಯಲು ಇಂದು ಸಂಜೆ 4 ಗಂಟೆಗೆ ಸಭೆ ನಡೆಸಿ, ಸುದೀರ್ಘ ಚರ್ಚೆ ನಡೆಸಿ ಕ್ರಮಕೈಗೊಳ್ಳಲು ಸೂಚನೆ ನೀಡುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕೇರಳದಲ್ಲೂ ಸೋಂಕು ಹೆಚ್ಚಳ. ಗಡೀ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದನ್ನ ಗಮನಿಸಿ ಶೀಘ್ರದಲ್ಲೇ ಮುಂಜಾಗ್ರತಾ ಕ್ರಮ ತಗೊಳ್ಳೋ ಬಗ್ಗೆ ಸಂಜೆ ಸಭೆ ನಡೆಸುತ್ತೇನೆ. ಸಭೆಯಲ್ಲಿ ಆರೋಗ್ಯ, ಕೋವಿಡ್ ತಜ್ಞರು ಭಾಗಿಯಾಗಲಿದ್ದಾರೆ. ಹೊಸ ತಳಿ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯುತ್ತೇನೆ. ಸಭೆಯಲ್ಲಿ ಚರ್ಚೆ ಬಳಿಕ ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಿಗೆ ತಿಳಿಸ್ತೇವೆ
ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಹೊಸ ರೂಪಾಂತರಿ ವೇಗವಾಗಿ ಹರುಡುವ ಬಗ್ಗೆ ಮಾಹಿತಿಯಿದೆ -ಸಚಿವ ಕೆ.ಸುಧಾಕರ್
ಸಭೆಯಲ್ಲಿ ಯಾರೆಲ್ಲಾ ಭಾಗಿ ಆಗಲಿದ್ದಾರೆ..
ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ನ ಸೋಂಕು ಉಲ್ಬಣ ವಿಚಾರವಾಗಿ ಇಂದು ಸಂಜೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಗುತ್ತೆ. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಈಗಾಗಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜೊತೆಗೆ ಮಾತುಕತೆ ನಡೆಸಿರುವ ಸಿಎಂ. ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ಬಳಿ ಮಾತುಕತೆ ನಡೆಸಿ ಬಳಿಕ ಸಭೆಗೆ ಬನ್ನಿ ಎಂದು ಸುಧಾಕರ್ಗೆ ಸಿಎಂ ಸೂಚನೆ ನೀಡಿದ್ದಾರೆ. ಸಂಜೆಯ ಸಭೆಗೆ ಬರುವ ಮುನ್ನಾ ಕೊರೊನಾ ಉಲ್ಬಣದ ಬಗ್ಗೆ ನಿಖರ ಮಾಹಿತಿ ಬೇಕು ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.