
ನೀವು ಈ ತರಕಾರಿಗಳನ್ನು ಸೇವಿಸುತ್ತಿದ್ದರೆ ಕೋವಿಡ್ ಬರುವ ಅಪಾಯ ಶೇ. 40 ರಷ್ಟಿ ಕಡಿಮೆ ಇರುತ್ತದೆ! ಅವು ಯಾವುವು ಗೊತ್ತಾ?
Healthy Diet: ನೀವು ಈ ಆಹಾರ ಪದಾರ್ಥ, ತರಕಾರಿಗಳನ್ನು ಸೇವಿಸುತ್ತಿದ್ದರೆ ನಿಮಗೆ ಕೋವಿಡ್ ಸೋಂಕು ತಗಲುವ ಅಪಾಯ ಶೇ. 40 ರಷ್ಟಿ ಕಡಿಮೆ ಇರುತ್ತದೆ! ಅಮೆರಿಕದ ಬೋಸ್ಟನ್ನಲ್ಲಿರುವ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನಾನಾ ರೀತಿಯ ಆಹಾರ ಅಭ್ಯಾಸ ಕ್ರಮಗಳು ಮತ್ತು ವಿವಿಧ ರೀತಿಯ ಆಹಾರ ಪದಾರ್ಥ, ತರಕಾರಿಗಳ ಸೇವನೆ ಮತ್ತು ಅದರಿಂದ ಆಗುವ ಪರಿಣಾಮಗಳ ಬಗ್ಗೆ ಪರಿಶೋಧನೆಗಳನ್ನು ಇತ್ತೀಚೆಗೆ ಕೈಗೊಂಡಿತ್ತು. ಆ ಅಧ್ಯಯನಗಳ ವರದಿಯ ಆಧರಿಸಿ ಆಹಾರನ ಕ್ರಮಗಳ ಬಗ್ಗೆ ಹೀಗೆ ಹೇಳಬಹುದು.
ಯುಎಸ್ಎ ಬೋಸ್ಟನ್ನಲ್ಲಿರುವ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಇತ್ತೀಚೆಗೆ ಅಂದರೆ ಕೊರೊನಾ ಸೋಂಕು ಕಾಲದಲ್ಲಿ ಸಾಕಷ್ಟು ಅಧ್ಯಯನಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಪ್ರಮುಖವಾದುದ್ದೊಂದು ವಿವಿಧ ಆಹಾರ ಪದಾರ್ಥ ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಜನರ ಮೇಲೆ ಕೋವಿಡ್ ಸೋಂಕು (Corona Virus) ತಗಲುವ ಅಪಾಯವನ್ನು ತಗ್ಗಿಸಬಹುದಾ ಎಂಬುದಾಗಿದೆ. ಇದರ ಆಧಾರದ ಮೇಲೆ ಕೋವಿಡ್ ಅಪಾಯವನ್ನು ಶೇ. 40 ರಷ್ಟು ಕಡಿಮೆ ಮಾಡಬಹುದು ಎಂದು ತಿಳಿದುಬಂದಿದೆ. ಹೆಚ್ಚು ಹೆಚ್ಚು ಹಣ್ಣುಗಳು, ತರಕಾರಿಗಳು, ಕಾಳುಗಳು, ಡ್ರೈ ಫ್ರೂಟ್ಸ್ ತಿನ್ನುವುದರಿಂದ (Covid-19) ಕೋವಿಡ್ ಬರುವ ಅಪಾಯವನ್ನು ಶೇ. 40 ರಷ್ಟು ಕಡಿಮೆ ಮಾಡಬಹುದಂತೆ! ಅದೇ ಕಡಿಮೆ ಪ್ರಮಾಣದಲ್ಲಿ ಹಣ್ಣುಗಳು ಮತ್ತು ತರಕಾರಿ ಸೇವಿಸುವವರಿಗೆ ಕೋವಿಡ್ ಬರುವ ಅಪಾಯ ಹೆಚ್ಚು ಎಂಬುದು ಈ ಅಧ್ಯಯನದ ಸಾರವಾಗಿದೆ. ಏಕೆಂದರೆ ಹಣ್ಣು, ತರಕಾರಿಗಳನ್ನು ನಿಯಮಿತವಾಗಿ ಹೆಚ್ಚು ಹೆಚ್ಚು ಸೇವಿಸುತ್ತಾ ಬಂದರೆ ನಮ್ಮಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ (Immunity).
ಉತ್ತರಮ ಪೋಷಕಾಂಶ ಆಹಾರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೋನಾ ಕಾಲದಲ್ಲಿ ಈ ವಿಷಯ ಅನೇಕರಿಗೆ ಮನದಟ್ಟಾಗಿದೆ. ಈಗೇನು ಕೊರೊನಾ ಇಲ್ಲಾ, ಏನೂ ಇಲ್ಲಾ ಅಂತಾ ನಿರ್ಲಕ್ಷ್ಯ ತಾಳಬೇಡಿ. ಕೊರೊನಾ ಇರಲಿ ಇಲ್ಲದಿರಲಿ, ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ. ಆದರೆ ಈ ಫಾಸ್ಟ್ ಫುಡ್ ಯುಗದಲ್ಲಿ ಅನೇಕ ಜನರಿಗೆ ಆರೋಗ್ಯತವಂತ ಆಹಾರ ಯಾವುದು? ಆರೋಗ್ಯ ಹಾಳು ಮಾಡುವ ಆಹಾರ ಯಾವುದು ಎಂಬುದರ ನಡುವಣ ಬಹುಮುಖ್ಯ ವ್ಯತ್ಯಾಸ ಗೊತ್ತಾಗುವುದಿಲ್ಲ. ಸುಮ್ನೇ ಕುರಕುಲು ತಿಂಡಿ ತಿನ್ನುತ್ತಾ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕೆ ಕಾರಣವಾಗಿಬಿಟ್ತಾರೆ. ಒಳ್ಳೆಯ ಪೋಷಕಾಂಶದ ಆಹಾರ ವೈರಸ್ ಗೆ ತಡೆಯೊಡ್ಡಬಲ್ಲದು. ಜೊತೆಗೆ, ಅಕಸ್ಮಾತ್ ವೈರಸ್ ತಗುಲಿದರೂ ಈ ಉತ್ತಮ ಆಹಾರಾಭ್ಯಾಸದಿಂದ ಬೇಗನೇ ಗುಣಮುಖರಾಗಬಹುದು ಅನ್ನುತ್ತಾರೆ ಈ ಪರಿಣತರು.