ಕೊರೊನಾ ಇಳಿಕೆಯಾದರೂ ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಮೈಕ್ರೋ ಕಂಟೈನ್ಮೆಂಟ್ ವಲಯಗಳು

ಬೆಂಗಳೂರು: ಲಾಕ್‍ಡೌನ್ ಸಡಿಲಿಕೆ ಆಗುತ್ತಿದ್ದಂತೆ ಬೆಂಗಳೂರು ನಗರದಲ್ಲಿ ಹೆಚ್ಚಾಗ್ತಿದೆ ಕೊರೋನಾ ಸೋಂಕು ಎಂಬ ಅನುಮಾನ ಕಾಡುತ್ತಿದೆ. ಕಾರಣ ದಿನದಿಂದ ದಿನಕ್ಕೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ ಹೆಚ್ಚಳವಾಗಿತ್ತಿದೆ.

ಬೆಂಗಳೂರಿನ 44 ಕಡೆಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಘೋಷಣೆ ಆಗಿದೆ. ನಗರದ 44ರಪೈಕಿ 20 ಪ್ರದೇಶಗಳು ಮಹಾದೇವಪುರ ವಲಯಕ್ಕೆ ಸೇರಿರುವ ಜಾಗವಾಗಿದೆ. ನಗರದ ಮೋಸ್ಟ್ ಡೇಂಜರಸ್ ಝೋನ್ ಮಹಾದೇವಪುರ ವಲಯ ಎಂಬ ಲೆಕ್ಕಚಾರಗಳು ನಡೆಯುತ್ತಿದೆ. ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಲ್ಲಿ ಬಹುತೇಕ ಅಪಾರ್ಟ್‍ಮೆಂಟ್‍ಗಳೇ ಇವೆ.

ಈಗಾಗಲೇ ಅಪಾರ್ಟ್‍ಮೆಂಟ್ ಗಳ ಸಂಘಕ್ಕೆ ಎಚ್ಚರಿಕೆ ಕೊಟ್ಟಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಕೋವಿಡ್ ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ. ಕೊರೋನಾ ಕಡಿಮೆಯಾಯಿತೆಂದು ಮೈ ಮರೆಯುತ್ತಿರುವ ಅಪಾರ್ಟ್‍ಮೆಂಟ್ ಗಳು ನಗರದ ಕೊರೋನಾ ಹಾಟ್ ಸ್ಪಾಟ್ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.

ಮಹಾದೇವಪುರದಲ್ಲಿ 20, ಯಲಹಂಕದಲ್ಲಿ 9, ಬೊಮ್ಮನಹಳ್ಳಿಯಲ್ಲಿ 8 ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಿವೆ. ಇತ್ತ ದಕ್ಷಿಣ ವಲಯದಲ್ಲಿ 5, ಪಶ್ಚಿಮ ವಲಯದಲ್ಲಿ 2 ಕಂಟೈನ್ಮೆಂಟ್ ಝೋನ್‍ಗಳಿಗೆ. ಆದರೆ ಆರ್‍ಆರ್ ನಗರ, ದಾಸರಹಳ್ಳಿ, ಬೆಂಗಳೂರು ಪೂರ್ವ ಮೈಕ್ರೋ ಕಂಟೈನ್ಮೆಂಟ್ ಮುಕ್ತ ವಲಯಗಳಾಗಿವೆ.

The post ಕೊರೊನಾ ಇಳಿಕೆಯಾದರೂ ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಮೈಕ್ರೋ ಕಂಟೈನ್ಮೆಂಟ್ ವಲಯಗಳು appeared first on Public TV.

Source: publictv.in

Source link