ಕೊರೊನಾ ಇಳಿಕೆ ಬೆನ್ನಲ್ಲೇ 2ನೇ ಡೋಸ್ ಲಸಿಕೆಗೆ ಜನರು ಹಿಂದೇಟು, ಸಿಂಗಾಪುರ ಮಾಡೆಲ್ ಪ್ರಸ್ತಾಪ ಮಾಡಿದ ತಾಂತ್ರಿಕ ಸಲಹಾ ಸಮಿತಿ | Second dose corona vaccination is challenge for Karnataka people are not taking vaccine after corona cases down


ಕೊರೊನಾ ಇಳಿಕೆ ಬೆನ್ನಲ್ಲೇ 2ನೇ ಡೋಸ್ ಲಸಿಕೆಗೆ ಜನರು ಹಿಂದೇಟು, ಸಿಂಗಾಪುರ ಮಾಡೆಲ್ ಪ್ರಸ್ತಾಪ ಮಾಡಿದ ತಾಂತ್ರಿಕ ಸಲಹಾ ಸಮಿತಿ

ಸಾಂಕೇತಿಕ ಚಿತ್ರ

ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಸದ್ಯ ಇಳಿ ಮುಖ ಕಂಡಿದೆ. ಇದರಿಂದ ಜನ ಮಹಾಮಾರಿಯನ್ನು ಸಂಪೂರ್ಣವಾಗಿ ಮರೆತು ಮುಂದೆ ಹೆಜ್ಜೆ ಹಾಕುತ್ತಿದ್ದಾರೆ. ಇದರ ನಡುವೆ ಕೊರೊನಾ ಇಲ್ಲವಲ್ಲ ಎಂದು 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ಸರ್ಕಾರದ ಮುಂದೆ ವ್ಯಾಕ್ಸಿನೇಷನ್‌ಗೆ ಸಿಂಗಾಪುರ ಮಾಡೆಲ್ ಪ್ರಸ್ತಾಪ ಮಾಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆ ಬೆನ್ನಲ್ಲೇ 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೊರೊನಾ ವ್ಯಾಕ್ಸಿನೇಷನ್ ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಅವಧಿ ಮುಗಿದ್ರೂ ಸೆಕೆಂಡ್ ಡೋಸ್ ಪಡೆಯಲು ಜನ ಮುಂದೆ ಬರುತ್ತಿಲ್ಲ. 2ನೇ ಡೋಸ್ ಲಸಿಕೆ ಹಾಕಲು ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ. ಸದ್ಯ ಈ ಸಮಸ್ಯೆಯನ್ನು ಬಗೆ ಹರಿಸಲು ತಾಂತ್ರಿಕ ಸಲಹಾ ಸಮಿತಿ ತಜ್ಞರು ಸಿಂಗಾಪುರ ಮಾಡೆಲ್ ಪ್ರಸ್ತಾಪಿಸಿದ್ದಾರೆ.

ವ್ಯಾಕ್ಸಿನೇಷನ್‌ ರೀಚ್ ಆಗಬೇಕು ಅಂದರೆ ಈ ಮಾಡೆಲ್ ಅನುಸರಿಸಿ ಅಂತಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ಯಾರು ಲಸಿಕೆ ಪಡೆಯುವುದಿಲ್ಲವೂ ಅವರಿಗೆ ಉಚಿತ ಚಿಕಿತ್ಸೆ ಇಲ್ಲ ಎಂದು ಶಿಫಾರಸ್ಸು ಮಾಡಿದೆ. ಲಸಿಕೆ ಪಡೆಯದವರಿಗೆ ಸಿಂಗಾಪುರದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲ್ಲ. ಅದೇ ಮಾದರಿಯನ್ನು ಇಲ್ಲೂ ಅನುಸರಿಸಿ ಎಂದು ಪ್ರಸ್ತಾಪಿಸಿದೆ.

ಇನ್ನು ಅವಧಿ ಮುಗಿದ್ರೂ ಸೆಕೆಂಡ್ ಡೋಸ್ ಪಡೆಯಲು ಜನ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ 45,14,612 ಜನ ವ್ಯಾಕ್ಸಿನ್ ಪಡೆದಿಲ್ಲ. ಸೆಕೆಂಡ್ ಡೋಸ್ ವ್ಯಾಕ್ಸಿನೇಷನ್‌ ನೀಡುವ ವೇಗಕ್ಕೆ ಹಿನ್ನಡೆಯಾಗಿದೆ. ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್, ಬಿಬಿಎಂಪಿ ವ್ಯಾಪ್ತಿಯಲ್ಲೇ ಹೆಚ್ಚು ಜನ 2ನೇ ಡೋಸ್ ಪಡೆದಿಲ್ಲ. ಉತ್ತರ ಕರ್ನಾಟಕ ಭಾಗದಲ್ಲೂ ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. 2ನೇ ಡೋಸ್ಗಾಗಿ ಕರೆ ಮಾಡಿದ್ರೆ ಬಹುತೇಕ ನಂ. ಸ್ವಿಚ್ ಆಫ್ ಮಾಡಲಾಗುತ್ತಿದೆ. 2ನೇ ಡೋಸ್ ವ್ಯಾಕ್ಸಿನೇಷನ್‌ ಆರೋಗ್ಯ ಇಲಾಖೆಗೆ ಸವಾಲಾಗಿದೆ.

ಜಿಲ್ಲೆಯಲ್ಲಿ 2ನೇ ಡೋಸ್ ವ್ಯಾಕ್ಸಿನೇಷನ್‌ ಪಡೆಯದವರು
ಬಿಬಿಎಂಪಿ -11,84,072
ಬೆಳಗಾವಿ -2,54,564
ಮೈಸೂರು -2,39,175
ಬೆಂಗಳೂರು ನಗರ -2,19,336
ಕಲಬುರಗಿ -1,72,111
ರಾಯಚೂರು -1,69,946
ಧಾರವಾಡ -1,69,599
ತುಮಕೂರು -1,66,934
ಬಳ್ಳಾರಿ -1,52,579
ದಾವಣಗೆರೆ -1,44,604
ಶಿವಮೊಗ್ಗ -1,40,677
ದಕ್ಷಿಣ ಕನ್ನಡ -1,22,511
ವಿಜಯಪುರ -1,23,792
ಮಂಡ್ಯ -1,09,024
ಬೆಂ. ಗ್ರಾಮಾಂತರ -1,08,330
ಬೀದರ್ -1,05,780
ಒಟ್ಟು= 45,14,612

ಇದನ್ನೂ ಓದಿ: ಕೊರೊನಾ ಲಸಿಕೆ ನೀಡಿಕೆಯಲ್ಲಿ ಹಿಂದುಳಿದ ಜಿಲ್ಲೆಗಳ ಮೇಲೆ ಪ್ರಧಾನಿ ಮೋದಿ ಕಣ್ಣು; ನವೆಂಬರ್​ 3ರಂದು ಪರಿಶೀಲನಾ ಸಭೆ

TV9 Kannada


Leave a Reply

Your email address will not be published. Required fields are marked *