ಪಾಟ್ನಾ: ಕೊರೊನಾ ಎರಡನೇ ಅಲೆಯ ತೀವ್ರತೆ ದೇಶದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಕಠಿಣ ನಿಯಮಗಳನ್ನು ಜಾರಿ ಮಾಡಿ, ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಜನರು ಕೂಡ ಸೋಂಕಿನ ಕುರಿತು ಮುನ್ನೆಚ್ಚರಿಕೆ ವಹಿಸುತ್ತಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ.

ಇದಕ್ಕೆ ಉದಾಹರಣೆಗೆ ಎಂಬಂತೆ ಬಿಹಾರದ ತೇಗ್ರಾ ಉಪವಿಭಾಗದ ತೇಗ್ರಾ ಬಜಾರ್‌ನಲ್ಲಿ ನಡೆದ ವಿಹಾರ ಕಾರ್ಯಕ್ರಮದಲ್ಲಿ ವಧು-ವರ ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಕೋಲುಗಳನ್ನು ಬಳಸಿಕೊಂಡು ಹೂವಿನ ಹಾರಗಳನ್ನು ಬದಲಿಸಿದ್ದಾರೆ. ಏಪ್ರಿಲ್ 30ರ ರಾತ್ರಿ ವಿವಾಹ ಕಾರ್ಯಕ್ರಮ ನಡೆದಿದೆ ಎನ್ನಲಾಗಿದ್ದು, ಕೊರೊನಾ ಅವಧಿಯದಲ್ಲಿ ನಡೆದ ವಿಶಿಷ್ಟವಾದ ವಿವಾಹವಾಗಿದೆ.

ವಿವಾಹ ಕಾರ್ಯಕ್ರಮದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕುಟುಂಬಸ್ಥರು ಹಾಗು ವಧು, ವರ ಕೂಡ ಸಂಪೂರ್ಣವಾಗಿ ಅನುಸರಿಸಿದ್ದಾರೆ. ನವಜೋಡಿಯ ಹೊಸ ಐಡಿಯಾದ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ. ಯುವ ಜೋಡಿಯ ಮದುವೆಗೆ ಹಾಜರಾದ ಬಂಧುಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ಕೇಳಿ ಬಂದಿದೆ.

The post ಕೊರೊನಾ ಎಫೆಕ್ಟ್​; ಕೋಲುಗಳ ನೆರವಿನಿಂದ ಹಾರ ಬದಲಿಸಿಕೊಂಡ ಜೋಡಿ appeared first on News First Kannada.

Source: newsfirstlive.com

Source link