ಬೀದರ್: ಕೊರೊನಾ ಮಹಾಮಾರಿಯ ಎರಡನೇಯ ಅಲೆಯ ಎಫೆಕ್ಟ್ ನಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಇಗಾಗೀ ಗಡಿ ಜಿಲ್ಲೆ ಬೀದರ್‌ನಲ್ಲಿ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳು ವಿವಿಧ ಕೆಲಸಗಳನ್ನು ಮಾಡುತ್ತಿದ್ದಾರೆ.

ತರಕಾರಿ ಮಾರಾಟ ಮಾಡುವುದು ಹಾಗೂ ಬೀದಿ ವ್ಯಾಪಾರ ಮಾಡಿ ಪೋಷಕರಿಗೆ ಸಹಕಾರಿಯಾಗುತ್ತಿದ್ದಾರೆ. ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣದ ಕನಸು ನುಚ್ಚುನೂರಾಗುತ್ತಿದೆ. ಕೊರೊನಾ ಎಫೆಕ್ಟ್ ನಿಂದಾಗಿ ಕೆಲಸಗಳಿಗೆ ವಿದ್ಯಾರ್ಥಿಗಳು ಇಳಿದಿರುವುದರಿಂದ ಅವರ ವಿಧ್ಯಾಭ್ಯಾಸಕ್ಕೆ ಬಾರಿ ಹೊಡೆತ ಬಿದ್ದಿದೆ. ಇದನ್ನೂ ಓದಿ:  ಉಡುಪಿಯ ಗದ್ದೆಯಲ್ಲಿ ಹೂತುಹೋದ ಕೃಷಿ ಸಚಿವರ ಕಾರು

ಶಾಲೆಗಳು ಬಂದ್ ಆಗಿವೆ ಹಿಗಾಗೀ ಕೆಲಸ ಮಾಡುತ್ತಿದ್ದಾರೆ. ಶಾಲೆಗಳು ಬಂದ್ ಆಗಿವೆ ಏನು ಮಾಡೋದು? ಶಾಲೆಗಳು ಪ್ರಾರಂಭವಾದ್ರೆ ನಮ್ಮ ಮಕ್ಕಳು ಶಾಲೆಗೆ ಹೋಗತ್ತಾರೆ ಎಂದು ಪೋಷಕರು ಹೇಳುತ್ತಿದ್ದಾರೆ.

ಭಾರತದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 48,698 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 1,183  ಮಂದಿ ಕೋವಿಡ್’ಗೆ ಬಲಿಯಾಗಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

The post ಕೊರೊನಾ ಎಫೆಕ್ಟ್- ತರಕಾರಿ ಮಾರಾಟಕ್ಕೆ ಇಳಿದ ವಿದ್ಯಾರ್ಥಿಗಳು appeared first on Public TV.

Source: publictv.in

Source link