ಮಂಡ್ಯ: ಜಿಲ್ಲೆಯಲ್ಲಿ ಹೈನುಗಾರಿಕೆ ಅತಿಯಾದ ಪರಿಣಾಮ ಲೀಟರ್ ಹಾಲಿಗೆ ಎರಡು ರೂಪಾಯಿ ಇಳಿಸಿ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (ಮನ್ಮುಲ್) ರೈತರಿಗೆ ಶಾಕ್ ನೀಡಿದೆ.
ಹೌದು ಸದ್ಯದ ದುಬಾರಿ ದುನಿಯಾದಲ್ಲಿ ಅಗತ್ಯ ವಸ್ತುಗಳ ಬೆಲೆ ಎಲ್ಲವು ದಿನದಿಂದ ದಿನಕ್ಕೆ ಗಗನಕ್ಕೇರಿತ್ತಿವೆ. ಅಂತ್ರದಲ್ಲಿ ಮನ್ಮುಲ್ ಹೈನಾಗಾರಿಕೆ ರೈತರಿಗೆ ಬೆಲೆ ಇಳಿಸುವ ಮೂಲಕ ಶಾಕ್ ನೀಡಿದೆ. ಲೀಟರ್‌ಗೆ 26 ರೂಪಾಯಿ ಇದ್ದ ಹಾಲಿನ ದರವನ್ನ ಇಂದಿನಿಂದ 24 ರೂಪಾಯಿಗೆ ಇಳಿಸುವುದಾಗಿ ಒಕ್ಕೂಟ ಆದೇಶಿಸಿದೆ.
ಕೊರೊನಾ ಬಿಕ್ಕಟ್ಟಿನಿಂದ ನಗರದಿಂದ ಹಳ್ಳಿಗಳಿಗೆ ಶಿಫ್ಟ್ ಆದ ಜನರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಬಾರಿ ಏರಿಕೆ ಕಂಡಿದೆ. ಜೊತೆಗೆ ಕೊರೊನಾ ಕಾಲದಲ್ಲಿ ಹೆಚ್ಚು ಉತ್ಪಾದನೆಯಾದ ಹಾಲು ಹಾಗೂ ಹಾಲಿನ ಉತ್ಪನ್ನಗಳು ಇದುವರೆಗೆ ಮಾರಾಟವಾಗಿಲ್ಲ. ಆದ್ದರಿಂದ ಉತ್ಪಾದನೆ ಹೆಚ್ಚಾಗಿ ಮಾರಾಟದ ಪರಮಾಣ ಕಡಿಮೆಯಾಗಿದೆ. ಇದರಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮನ್ಮುಲ್ಗೆ 33 ಕೋಟಿ ನಷ್ಟ ಉಂಟಾಗಿದೆ. ಹೀಗಾಗಿ 2 ರೂಪಾಯಿ ಕಡಿಮೆ ಮಾಡಲಾಗಿದೆ ಎಂದು ಮನ್ಮುಲ್ ತಿಳಿಸಿದೆ.