ಕೊರೊನಾ ಏನೂ ಮಾಡಲ್ಲ ಅಂತ ವಾದ; ಬೇಕಂತಲೇ ಸೋಂಕಿಗೆ ಒಳಗಾಗಿದ್ದ ಗಾಯಕಿ ಸಾವು


ಝೆಕ್​ ಗಣರಾಜ್ಯದ ಖ್ಯಾತ ಜಾನಪದ ಗಾಯಕಿ ಹನಾ ಹೋಕ್ರಾ ಬೇಕಂತಲೇ ಕೋವಿಡ್​ ಅಂಟಿಸಿಕೊಂಡು ಕೊನೆಯುಸಿರೆಳೆದಿದ್ದಾರೆ. ಹೌದು 57 ವಯಸ್ಸಿನ ಈ ಗಾಯಕಿ ಕೊರೊನಾ ಕಾಲದಿದಂಲೂ ಕೋವಿಡ್​ ವ್ಯಾಕ್ಸಿನ್​ನ್ನು ವಿರೋಧಿಸುತ್ತಾ ಬಂದಿದ್ದರು. ಇತ್ತೀಚಿಗೆ ಕ್ರಿಸ್​ಮಸ್​ ಮುನ್ನ ಗಾಯಕಿಯ ಪತಿ, ಮತ್ತು ಪುತ್ರ ಕೋವಿಡ್​ ಸೋಂಕಿಗೆ ತುತ್ತಾಗಿದ್ದರು. ಈ ವೇಳೆ ಅವರು ಮನೆಯಲ್ಲಿಯೇ ಕ್ವಾರಂಟೀನ್​ ಆಗಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇದ್ಯಾವುದನ್ನು ಲೆಕ್ಕಿಸದೆ ಗಾಯಕಿ ಕೋವಿಡ್​ ನಿಯಮಗಳನ್ನು ಪಾಲಿಸದೇ ನಮ್ಮ ಜತೆ ಊಟ , ತಿಂಡಿ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು ಎಂದು ಪುತ್ರ ಜಾನ್​ ರೆಕ್​ ಪಬ್ಲಿಕ್​ ರೇಡಿಯೋನಲ್ಲಿ ತಿಳಿಸಿದ್ದಾರೆ.

ಇತ್ತೀಚಿಗೆ ಈ ರಾಷ್ಟ್ರದಲ್ಲಿ ಕೋವಿಡ್​ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದಂತೆ ಸರ್ಕಾರ ಕಠಿಣ ನಿಯಮಗಳನ್ನು ವಿಧಿಸಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸ ಬೇಕಾದರೆ ಡಬಲ್​ ಡೋಸ್​ ಲಸಿಕೆಯಾಗಿರುವ ವರದಿ ಕಡ್ಡಾಯ ಎಂಬ ನಿಯಮ ಜಾರಿಗೆ ತಂದಿದೆ. ಇದು ತಂಡ ಕಟ್ಟಿಕೊಂಡು ಹಾಡು ಹೇಳಲು ತೆರಳುತ್ತಿದ್ದ ಗಾಯಕಿಯ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ ಅವರು ಆಂಟಿ ವ್ಯಾಕ್ಸಿನ್​ ಎಂದು ಹೇಳಿಕೊಳ್ಳುತ್ತಾ ವ್ಯಾಕ್ಸಿನ್​ ಪಡೆಯದೇ ಅದನ್ನು ವಿರೋಧಿಸುತ್ತಾ ಬಂದಿದ್ದರು.

News First Live Kannada


Leave a Reply

Your email address will not be published. Required fields are marked *