ಹಳ್ಳಿಯತ್ತ ನ್ಯೂಸ್​ ಫಸ್ಟ್​.. ಹಳ್ಳಿ ಹಳ್ಳಿಗೂ ನ್ಯೂಸ್​​ ಫಸ್ಟ್.. ಹೌದು.. ಭಾರತ ಹಳ್ಳಿಗಳ ರಾಷ್ಟ್ರ.. ಇಂದಿಗೂ ದೇಶದ ಅತಿ ಹೆಚ್ಚು ಜನವಸತಿ ಇರೋದು ಹಳ್ಳಿಗಳಲ್ಲಿಯೇ.. ಹಳ್ಳಿಗರು ಉದಾರಿಗಳು.. ಹಳ್ಳಿಗರು ಸಹಜ ಮಾನವತಾ ವಾದಿಗಳು.. ಹಳ್ಳಿಗರು ಮಾನವೀಯ ಸಂಬಂಧಕ್ಕೆ ಒತ್ತು ನೀಡುವಂಥವರು.. ಆದ್ರೆ ಇಂಥ ಹಳ್ಳಿಗಳ ಅಸ್ತಿತ್ವದ ಪ್ರಶ್ನೆ ಉಂಟಾಗುವಂಥ ಗಂಭೀರ ಸಂಗತಿಗಳು ಇಂದು ಗೋಚರಿಸುತ್ತಿವೆ..

ಅದ್ರಲ್ಲೂ ಕೊರೊನಾ ಸೋಂಕು ಎರಡನೇ ಅಲೆಯಲ್ಲಿ ಹಳ್ಳಿಗಳಲ್ಲೂ ವಿಪರೀತವಾಗಿ ಹರಡುತ್ತಿರೋದು ಕಂಡು ಬರುತ್ತಿದೆ.. ಇಂಥ ಸೋಂಕನ್ನು ಎದುರಿಸಲು ಭಾರತದ ಅದ್ರಲ್ಲೂ ಕರ್ನಾಟಕದ ಹಳ್ಳಿಗಳು ಸಿದ್ಧವಾಗಿವೆಯಾ? ಹಳ್ಳಿಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿದೆಯಾ? ಮಾಸ್ಕ್ ಧರಿಸೋದು-ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು- ವ್ಯಾಕ್ಸಿನ್ ಪಡೆದುಕೊಳ್ಳೋದು.. ಮುಂತಾದವುಗಳನ್ನು ಹಳ್ಳಿಗರು ಮಾಡುತ್ತಿದ್ದಾರಾ? ಹಳ್ಳಿ ನಿವಾಸಿಗಳ ರಕ್ಷಣೆಗಾಗಿ ಸರ್ಕಾರ ಏನು ಕ್ರಮ ಕೈಗೊಂಡಿದೆ? ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಸಿಗುತ್ತಿದೆಯಾ? ಅವರು ಯಾವ ಆಸ್ಪತ್ರೆಗೆ ಹೋಗಬೇಕು? ಅನ್ನೋ ಮಾಹಿತಿ ನೀಡಲಾಗ್ತಿದೆಯಾ? ಕ್ವಾರಂಟೀನ್ ಸೆಂಟರ್​ಗಳನ್ನ ಮಾಡಲಾಗಿದೆಯಾ? ಮುಂತಾದ ವಿಷಯಗಳನ್ನು ಹಳ್ಳಿಗಳಿಗೇ ಭೇಟಿ ನೀಡಿ.. ತಿಳಿಯುವ ಮತ್ತು ಈ ಮಾಹಿತಿಯನ್ನು ಬಿತ್ತರಿಸುವ ನೇರ ಪ್ರಸಾರದ ಮಹಾಭಿಯಾನವನ್ನು ಇಂದಿನಿಂದ ನ್ಯೂಸ್​ ಫಸ್ಟ್​ ಆರಂಭಿಸಿದೆ..

ಎಲ್ಲೆಲ್ಲಿ ನ್ಯೂಸ್​ ಫಸ್ಟ್ ಮಹಾಭಿಯಾನ? 

ನ್ಯೂಸ್​ಫಸ್ಟ್, ಕೊರೊನಾ ಓಡಿಸಿ ಹಳ್ಳಿ ಉಳಿಸಿ ಅನ್ನೋ ಬೃಹತ್​ ಜಾಗೃತಿ ಅಭಿಯಾನವನ್ನ ಕಳೆದ 10 ದಿನಗಳಿಂದ ಮಾಡ್ತಿದೆ. ಈ ಅಭಿಯಾನದ ಭಾಗವಾಗಿ ಇವತ್ತು ನ್ಯೂಸ್​ಫಸ್ಟ್​ ಹಳ್ಳಿಚಲೋ ಅನ್ನೋ ವಿಶೇಷ ನೇರಪ್ರಸಾರವನ್ನ ನಾವು ಮಾಡ್ತಿದ್ದೀವಿ. ಇವತ್ತಿನ ನಮ್ಮ ಈ ನೇರಪ್ರಸಾರದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಆಯಾ ಜಿಲ್ಲೆಯ ಹಲವು ಹಳ್ಳಿಗಳಿಂದ ಅಲ್ಲಿಯ ವಸ್ತುಸ್ಥಿತಿಯ ವರದಿ ಮಾಡೋ ಜೊತೆಗೆ ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸುವಂಥ ಕೆಲಸವನ್ನ ಮಾಡ್ತಿದ್ದೀವಿ. ನಮ್ಮ ಈ ಜಾಗೃತಿ ಅಭಿಯಾನದಲ್ಲಿ ಪಕ್ಷಾತೀತವಾಗಿ ಹಲವಾರು ರಾಜಕೀಯ ನಾಯಕರು, ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು ಕೂಡ ಭಾಗಿಯಾಗಲಿದ್ದಾರೆ. ನಮ್ಮ ಜೊತೆಯಲ್ಲಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳೂ ಸೇರಿದಂತೆ ಆರೋಗ್ಯಾಧಿಕಾರಿಗಳೂ ಸಹ ಹಳ್ಳಿಯ ಜನರಲ್ಲಿ ಜಾಗೃತಿಯನ್ನ ಮೂಡಿಸೋ ಕೆಲಸ ಮಾಡಲಿದ್ದಾರೆ.

ಜೊತೆಗೆ ಯಾವೆಲ್ಲ ಗ್ರಾಮಗಳು ಈ ಬಾರಿ ಕೊರೊನಾ ಅಲೆ ತಡೆಗಟ್ಟುವಲ್ಲಿ ಸಫಲವಾಗಿವೆ? ಅಲ್ಲಿಯ ವಿಶೇಷತೆಗಳು ಏನು? ಮುಂತಾದವುಗಳನ್ನೂ ತೋರಿಸಲಾಗುತ್ತೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಂಬಳಗೋಡು ಗ್ರಾಮ, ಜೊತೆಗೆ ಹಾಸನದ ಶಾಂತಿಗ್ರಾಮ, ಹುಬ್ಬಳ್ಳಿ ಬಳಿಯ ಬ್ಯಾಹಟ್ಟಿ ಗ್ರಾಮ, ಶಿರಸಿ ಬಳಿಯ ಗ್ರಾಮಗಳು, ಶಿವಮೊಗ್ಗ ಬಳಿಯ ಕುಮ್​ಚೇನಹಳ್ಳಿ ತಾಂಡ, ನಾರಾಯಣಪುರ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಹಿರೇಬಾಗೇವಾಡಿ, ತುಮಕೂರು ಜಿಲ್ಲೆಯ ಮ್ಯದಳಾ ಗ್ರಾಮ, ಮಂಡ್ಯ ಜಿಲ್ಲೆಯ ಬಾಳೆಪುನಿ, ರಾಯಚೂರು ಜಿಲ್ಲೆಯ ಗ್ರಾಮಗಳು, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಧಾರವಾಡ ಜಿಲ್ಲೆಯ ಮಿಶ್ರಿಕೋಟಿ, ಕಾರವಾರ ಬಳಿಯ ಚಿತ್ತಾಪುರ ಮುಂತಾದ ಗ್ರಾಮಗಳಿಂದ ವರದಿ ನೀಡಲಾಗ್ತಿದೆ.

The post ಕೊರೊನಾ ಓಡಿಸಿ.. ಹಳ್ಳಿ ಉಳಿಸಿ: ನ್ಯೂಸ್​ ಫಸ್ಟ್​​ನ ಮಹಾಭಿಯಾನ ಶುರು appeared first on News First Kannada.

Source: newsfirstlive.com

Source link