ತುಮಕೂರು: ಕೊರೊನಾ ಎರಡನೇ ಅಲೆಯಿಂದ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಾಕಷ್ಟು ತೊಂದರೆಯಾಗಿದೆ. ಈ ರೋಗ ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ಈ ಹಿನ್ನಲೆಯಲ್ಲಿ ನ್ಯೂಸ್​​ಫಸ್ಟ್​ ಕೊರೊನಾ ಓಡಿಸಿ ಹಳ್ಳಿ ಉಳಿಸಿ ಎಂಬ ಜಾಗೃತಿ ಅಭಿಯಾನ ನಡೆಸುತ್ತಿದೆ. ಈ ಅಭಿಯಾನಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಮೆಚ್ಚಗೆ ಸೂಚಿಸಿದ್ದಾರೆ.

ಅಭಿಯಾನದ ಕುರಿತು ಮೆಚ್ಚುಗೆ ಸೂಚಿಸಿ ಮಾತನಾಡಿದ ಶ್ರೀಗಳು, ಕೋವಿಡ್-19 ಎರಡನೇ ಅಲೆಯಿಂದ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಾಕಷ್ಟು ತೊಂದರೆಯಾಗಿದೆ. ಈ ರೋಗ ಹಳ್ಳಿಕಡೆಗೂ ವ್ಯಾಪಿಸುತ್ತಿರುವುದು ಚಿಂತಜನಕವಾಗಿದೆ. ಹಳ್ಳಿ ಜನ ಮುಗ್ದರಾಗಿರುವಂತವರು, ಅವರಿಗೆ ಸೌಲಭ್ಯಗಳು ಕಡಿಮೆ ಇದೆ. ಸರ್ಕಾರ ಕೂಡ ಈ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಮಾಧ್ಯಮಗಳು ಹಳ್ಳಿ ಜನರನ್ನು ಜಾಗೃತಿಗೊಳಿಸುವಂತಹ ಕೆಲಸ ಮಾಡಬೇಕು.

ಯಾವುದನ್ನೂ ಅಸಡ್ಡೆ ಮಾಡದೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಹಳ್ಳಿಗಳನ್ನು ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಮಾಧ್ಯಮ ಕೆಲಸ ಮಾಡಬೇಕು. ಕೊರೊನಾ ಓಡಿಸಿ ಹಳ್ಳಿ ಉಳಿಸಿ ಆಂದೋಲನ ಮಾಡಿ ಕೆಲಸ ಮಾಡುತ್ತಿದ್ದೀರಿ. ಇದರಿಂದ ಹಳ್ಳಿ ಉಳಿಸಿ ಹಳ್ಳಿಯಲ್ಲಿರುವ ಜೀವ ಉಳಿಸಿ. ರಾಜ್ಯ ಸರ್ಕಾರದ ಮಾರ್ಗ ಸೂಚಿಗಳನ್ನು ತಪ್ಪದೇ ಪಾಲಿಸುವುದು ಮುಖ್ಯ. ಲಸಿಕೆ ಉಚಿತವಾಗಿ ಕೊಡ್ತಿದಾರೆ ಅದರ ಪ್ರಯೋಜನವನ್ನು ಪಡೆದುಕೊಳ್ಳಿ. ಹಾಗೇ ತಾಲೂಕು ಮಟ್ಟದಲ್ಲಿ ಸೇರಿದಂತೆ ಅಲ್ಲಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿದಾರೆ ಅಲ್ಲಿ ಚಿಕಿತ್ಸೆ ಪಡೆದುಕೊಳ್ಳಿ.

ಸೋಂಕಿತರು ಮನೆಯಲ್ಲೇ ಇದ್ದರೆ ಮನೆಯಲ್ಲಿರುವ ಇತರರಿಗೂ ಹರಡುವ ಸಾಧ್ಯತೆ ಇದೆ. ಹಾಗಾಗಿ ಕೋವಿಡ್ ಕೇರ್ ಅಥವಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ. ತಡ ಮಾಡಬೇಡಿ ಅನಾಹುತಕ್ಕೆ ಅವಕಾಶ ಮಾಡಿಕೊಡಬೇಡಿ. ಭಯ ಭೀತರಾಗಬೇಡಿ, ಇದು ರೋಗಕ್ಕಿಂತ ಬೇಗ ತಿಂದು ಬಿಡುತ್ತೆ, ಎಚ್ಚರಿಕೆ ಇರಲಿ. ಎಚ್ಚರಿಕೆ ವಹಿಸಿ ಸರ್ಕಾರದ ಜೊತೆ ಕೈ ಜೋಡಿಸಿ ಎಂದು ಮನವಿ ಶ್ರೀಗಳು ಮನವಿ ಮಾಡಿದರು.

The post ‘ಕೊರೊನಾ ಓಡಿಸಿ ಹಳ್ಳಿ ಉಳಿಸಿ’-ನ್ಯೂಸ್​​ಫಸ್ಟ್​​ ಅಭಿಯಾನಕ್ಕೆ ಸಿದ್ದಗಂಗಾ ಶ್ರೀಗಳ ಮೆಚ್ಚುಗೆ appeared first on News First Kannada.

Source: newsfirstlive.com

Source link