ದಾವಣಗೆರೆ: ಕೊರೊನಾದ ಎರಡನೇ ಅಲೆಯ ತೀವ್ರತೆಗೆ ಬ್ರೇಕ್​ ಹಾಕಲು ರಾಜ್ಯ ಸರ್ಕಾರ ಲಾಕ್​ಡೌನ್​ ಜಾರಿ ಮಾಡಿ ರೋಡ್​ಗೆ ಇಳಿದಿರೋ ಜನರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸೂಚನೆ ನೀಡಿದೆ.

ಆದರೆ ಸರ್ಕಾರದ ನಿಯಮಗಳು ಸಾರ್ವಜನಿಕರಿಗೆ ಹೊರತು ರಾಜಕೀಯ ನಾಯಕರು ಹಾಗೂ ಅವರ ಮಕ್ಕಳಿಗೆ ಅನ್ವಯ ಆಗೋದಿಲ್ಲ ಎಂಬ ಮಾತು ಕೇಳಿ ಸಾಮಾನ್ಯವಾಗಿ ಕೇಳಿ ಬರುತ್ತದೆ. ಇದಕ್ಕೆ ಪೂರಕ ಎಂಬಂತೆ ಲಾಕ್​ಡೌನ್ ನಡುವೆಯೂ ದಾವಣಗೆರೆ ಯೂತ್ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹಾಗೂ ಕೆಲ ನಾಯಕರ ಮಕ್ಕಳು ಮಸ್ತ್​ ಮಸ್ತ್​ ಪಾರ್ಟಿ ಮಾಡಿರೋ ವಿಡಿಯೋ ವೈರಲ್​ ಆಗಿದೆ.

ಎಂಎಲ್‌ಸಿ ಮೋಹನ್‌ ಕೊಂಡಜ್ಜಿ ಸಹೋದರರ ಮಗ, ದಾವಣಗೆರೆ ಜಿಲ್ಲಾ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ನಿಖಿಲ್‌ ಕೊಂಡಜ್ಜಿ ಸೇರಿದಂತೆ ಹಲವರು ಹಾಡಹಗಲೇ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಸ್ಕೌಟ್ ಅಂಡ್ ಗೈಡ್ ಕೇಂದ್ರದ ಕಟ್ಟಡದಲ್ಲಿ ಪಾರ್ಟಿ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಪಾರ್ಟಿಯಲ್ಲಿ ಯುವತಿಯರು ಹಾಗೂ ಲಕ್ಷ್ಮಿ ಹೆಬಾಳ್ಕರ್ ಪುತ್ರ ಭಾಗಿಯಾಗಿದ್ದರು ಎನ್ನಲಾಗಿದ್ದು, ಕಳೆದ ಎರಡು ದಿನದ ಹಿಂದೆ ನಡೆದಿರುವ ಪಾರ್ಟಿಯ ವಿಡಿಯೋ ವೈರಲ್ ಆಗಿದೆ.

ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಮದುವೆ ಪಾರ್ಟಿ ನೀಡಲು ಸರ್ಕಾರಿ ಕಟ್ಟಡ ಬಳಸಿದ್ರಾ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಸ್ಥಳದಲ್ಲೇ ಸ್ಥಳೀಯ ಯುವಕರು ಸರ್ಕಾರಿ ಕಟ್ಟಡದಲ್ಲಿ ನಡೆದ ಪಾರ್ಟಿಗೆ ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಯಾರನ್ನು ಕರೆಸುತ್ತೀಯೋ ಕರೆಸೋ ಎಂದು ಹೇಳಿ ನಿಖಿಲ್​​ ಕೊಂಡಜ್ಜಿ ಉದ್ಧಟತನ ತೋರಿದ್ದಾರೆ.

ಕೋವಿಡ್‌ ನಿಯಮಾವಳಿ ಉಲ್ಲಂಘಿಸಿದ್ರು ಯಾವುದೇ ಕ್ರಮ ಜರುಗಿಸದ ಜಿಲ್ಲಾಡಳಿತ ನಡೆಯನ್ನು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ದೊಡ್ಡವರಿಗೊಂದು ನ್ಯಾಯ, ಸಾಮಾನ್ಯರಿಗೊಂದು ನ್ಯಾಯ. ಯುವಕರಿಗೆ ಮಾದರಿ ಆಗಬೇಕಾದ ಜಿಲ್ಲಾ ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಮೋಜು ಮಸ್ತಿ ಮಾಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

The post ಕೊರೊನಾ ಕಂಟಕ; ಯೂತ್​​ ಕಾಂಗ್ರೆಸ್​ ಜಿಲ್ಲಾಧ್ಯಕ್ಷ, ಲಕ್ಷ್ಮಿ ಹೆಬಾಳ್ಕರ್ ಪುತ್ರ ಮಸ್ತ್​​ ಮಸ್ತ್​ ಪಾರ್ಟಿ appeared first on News First Kannada.

Source: newsfirstlive.com

Source link