ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಈ ನಡುವೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ನಗರದ ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕೊರೊನಾ ದೂರ ಆಗಬೇಕು ಎಂದು ದೇವರ ದರ್ಶನ ಪಡೆದು ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದಲ್ಲಿ ದಿನೇ ದಿನೇ ಕೇಸ್ ಜಾಸ್ತಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಹತ್ವದ ಸಭೆ ಕರೆಯಲಾಗಿದೆ. ಜನತಾ ಕರ್ಫ್ಯೂ ಯಾರು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಇನ್ನು ‌ಬಿಗಿ ಕ್ರಮ ಅನಿವಾರ್ಯ ಇದೆ. ಲಾಕ್ ಡೌನ್ ಅನಿವಾರ್ಯ ಆಗಬಹುದು.

ಜನರ ಪರವಾಗಿ ನಾವು ಇದ್ದೇವೆ. ಆದರೆ ಬೆಡ್ ಸಿಗಲ್ಲ ಅಂತ ಸಿಎಂ ಮನೆ ಬಳಿ ,ವಿಧಾನಸೌಧ ಬಳಿ ಬರುವುದು ಸರಿ ಅಲ್ಲ. ಈ ರೀತಿ ಬರುವುದು ಬೇಡ. ಬೆಡ್ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತನ್ನಿ ಬೆಡ್ ಕೊಡಿಸುವ ಕ್ರಮ ತೆಗೆದುಕೊಳ್ಳುತ್ತೇವೆ. ವಿಧಾನಸೌಧದಲ್ಲಿ ಮಾತನಾಡಿ ಬಿಗಿ ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದರು.

The post ಕೊರೊನಾ ಕಂಟ್ರೋಲ್​​ಗೆ ಅಣ್ಣಮ್ಮ ದೇವಿ ಮೊರೆ ಹೋದ ಸಿಎಂ- ಲಾಕ್​ಡೌನ್ ಮುನ್ಸೂಚನೆ appeared first on News First Kannada.

Source: newsfirstlive.com

Source link