ನವದೆಹಲಿ: ಬಾಲಿವುಡ್ ಸಿನಿಮಾ ನಿರ್ದೇಶಕ ರೋಹಿತ್ ಶೆಟ್ಟಿ ಕೊರೊನಾ ರೋಗಿಗಳ ಆರೈಕೆ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

ದೇಶವನ್ನು ಕಾಡುತ್ತಿರುವ ಕೊರೊನಾ 2ನೇ ಅಲೆಗೆ ಬೆಡ್ ಸಿಗದೆ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ದುಸ್ಥಿತಿ ಸಂದರ್ಭದಲ್ಲಿ ರೋಹಿತ್ ಶೆಟ್ಟಿ ನೆರವಿಗೆ ಧಾವಿಸಿದ್ದಾರೆ. ನವದೆಹಲಿಯಲ್ಲಿ ಆಕ್ಸಿಜನ್ ಸಹಿತ 25 ಬೆಡ್‍ಗಳ ಕೊರೊನಾ ಸೆಂಟರ್ ಸ್ಥಾಪಿಸಿದ್ದಾರೆ. ಆಸ್ಪತ್ರೆ ಬಿಲ್ ಕಟ್ಟಲಾಗದ ಬಡ ರೋಗಿಗಳಿಗೆ ಇಲ್ಲಿ ಬೆಡ್ ವ್ಯವಸ್ಥೆ ಮಾಡಲಾಗಿದೆ. ಊಟ ಸೇರಿದಂತೆ ಹಲವು ಸೌಲಭ್ಯಗಳನ್ನು ಉಚಿತವಾಗಿ ಮಾಡಲಾಗಿದೆ.

ರೋಹಿತ್ ಶೆಟ್ಟಿಯವರು ಈ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಹಿತ್ ಅವರಂತೆ ಬಾಲಿವುಡ್ ಅನೇಕ ತಾರೆಯರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಅಕ್ಷಯ್‍ಕುಮಾರ್, ಸಲ್ಮಾನ್‍ಖಾನ್, ಸೋನು ಸೂದ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿಂದತೆ ಹಲವರು ಜಾಗೃತಿ ಮೂಡಿಸುವುದು ಜೊತೆಗೆ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.

The post ಕೊರೊನಾ ಕೇರ್ ಸೆಂಟರ್ ತೆರೆದ ನಿರ್ದೇಶಕ ರೋಹಿತ್ ಶೆಟ್ಟಿ appeared first on Public TV.

Source: publictv.in

Source link