ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆಗೆ ಬ್ರೇಕ್​ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ 14 ದಿನಗಳ ಕ್ಲೋಸ್​ಡೌನ್​ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ VTU ಪರೀಕ್ಷೆಗಳನ್ನು ಮುಂದೂಡಿ ಆದೇಶ ನೀಡಿದೆ.

ಈ ಕುರಿತು ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದು, ‘ಕೋವಿಡ್ ಕರ್ಫ್ಯೂ’ ಜಾರಿ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್‌ನ ಎಲ್ಲಾ ಪರೀಕ್ಷೆಗಳನ್ನು ಹಾಗೂ ಡಿಪ್ಲೋಮಾ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಕೊರೊನಾ ಕರ್ಫ್ಯೂ ಮುಗಿದ ನಂತರ ತಿಳಿಸಲಾಗುವುದು. ವಿದ್ಯಾರ್ಥಿ ಮಿತ್ರರು ಸಹಕರಿಸಬೇಕಾಗಿ ಕೋರಿಕೆ ಎಂದು ಬರೆದುಕೊಂಡಿದ್ದಾರೆ.

The post ಕೊರೊನಾ ಕ್ಲೋಸ್​​ಡೌನ್​​- VTU ಪರೀಕ್ಷೆ ಮುಂದೂಡಿದ ಸರ್ಕಾರ appeared first on News First Kannada.

Source: News First Kannada
Read More