ಕೊರೊನಾ ಗುಣವಾಗಿಸಲು ಮಾತ್ರೆ ತಯಾರಿಕೆ; ಅಮೆರಿಕಾದಿಂದ ₹22 ಸಾವಿರ ಕೋಟಿ ವೆಚ್ಚ

ಕೊರೊನಾ ಗುಣವಾಗಿಸಲು ಮಾತ್ರೆ ತಯಾರಿಕೆ; ಅಮೆರಿಕಾದಿಂದ ₹22 ಸಾವಿರ ಕೋಟಿ ವೆಚ್ಚ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸರ್ಕಾರ ಈ ಹಿಂದೆ ಕೊರೊನಾದಿಂದ ಮುಕ್ತಿ ಪಡೆಯಲು ಬರೋಬ್ಬರಿ 18 ಬಿಲಿಯನ್ ಡಾಲರ್​​ ಹಣವನ್ನ ಔಷಧ ತಯಾರಕರ ಎದುರು ಸುರಿದಿತ್ತು. ಇದರ ಪರಿಣಾಮೆಂಬಂತೆ ಯುನೈಟೆಡ್​ ಸ್ಟೇಟ್ಸ್​​ನಲ್ಲಿ ಈಗ 5 ಅತಿ ಪರಿಣಾಮಕಾರಿ ವ್ಯಾಕ್ಸಿನ್​ಗಳು ತಯಾರಾಗಿವೆ. ಇದೇ ಬೆನ್ನಲ್ಲೇ ಇದೀಗ ಮತ್ತೊಂದು ಕಾರ್ಯಕ್ರಮಕ್ಕೆ ಸುಮಾರು 3 ಬಿಲಿಯನ್ ಡಾಲರ್​ ಹಣವನ್ನ ವೆಚ್ಛ ಮಾಡಲು ಯುನೈಟೆಡ್​ ಸ್ಟೇಟ್ಸ್ ಆಫ್ ಅಮೆರಿಕಾ ನಿರ್ಧರಿಸಿದೆ.

ಚಿಕಿತ್ಸೆಗೆ ಬಳಸಲಾಗುವ ಅತಿ ಸುಲಭದ ಮದ್ದುಗಳಲ್ಲಿ ಟ್ಯಾಬ್ಲೆಟ್ ಪ್ರಮುಖವಾದುದು.. ಈ ಟ್ಯಾಬ್ಲೆಟ್​ಗಳ ತಯಾರಿಕೆಗಾಗಿ ಯುನೈಟೆಡ್ ಸ್ಟೇಟ್ಸ್ ಮುಂದಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದ ಮುಕ್ತಿ ಪಡೆಯಲು ಕೊರೊನಾ ಸೋಂಕಿಗೆ ಪಿಲ್ಸ್​ಗಳನ್ನ ತಯಾರಿಸಲು ಅಲ್ಲಿನ ಔಷಧ ತಯಾರಿಕಾ ಕಂಪನಿಗಳಿಗೆ ಹೇಳಿದ್ದು 3 ಬಿಲಿಯನ್ ಡಾಲರ್ (₹2,21,72,10,00,000) ಹಣವನ್ನ ಸುರಿಯಲು ಸಿದ್ಧವಾಗಿದೆ.

ಜೋ ಬೈಡನ್, ಅಮೆರಿಕಾ ಅಧ್ಯಕ್ಷ

ಈ ಹೊಸ ಯೋಜನೆ ಕಳೆದ ಗುರುವಾರ ಘೋಷಣೆಯಾಗಿದ್ದು ಇದರಿಂದ ಈಗಾಗಲೇ ಕೊರೊನಾ ವಿರುದ್ಧ ಹೋರಾಡಲು ತಯಾರಾಗಿರುವ ಪಿಲ್ಸ್​​ಗಳ ವೈದ್ಯಕೀಯ ಪ್ರಯೋಗವನ್ನು ನಡೆಸಲು ವೇಗ ಸಿಕ್ಕಂತಾಗಲಿದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತಾದರೆ ಈ ವರ್ಷಾಂತ್ಯದ ವೇಳೆಗೆ ಔಷಧಗಳು ಮಾತ್ರೆ ರೂಪದ ಪಿಲ್ಸ್​ಗಳು ತಯಾರಾಗಬಹುದು. ಇನ್ನು ಕೇವಲ ಕೊರೊನಾ ಮಾತ್ರವಲ್ಲದೇ ಭವಿಷ್ಯದಲ್ಲಿ ಸೋಂಕು ಹರಬಹುದಾದ ವೈರಸ್​ಗಳ ವಿರುದ್ಧವೂ ಹೋರಾಡುವ ಆ್ಯಂಟಿ ವೈರಲ್ ಪಿಲ್ಸ್​ಗಳ ತಯಾರಿಕೆಗೆ ಯು ಎಸ್​ ಮುಂದಾಗಿದೆ ಎನ್ನಲಾಗಿದೆ.

ಈವರೆಗೆ ಇನ್​ಫ್ಲೂಯೆಂಜಾ, ಹೆಚ್ಐವಿ, ಹೆಪಟೈಟಿಸ್ ಸಿ ವೈರಸ್​ಗಳಿಗೆ ಪಿಲ್ಸ್​ ಮೂಲಕವೇ ಚಿಕಿತ್ಸೆ ನೀಡುವಂತಾಗಿದ್ದರೂ ಈವರೆಗೆ ಕೊರೊನಾ ವಿರುದ್ಧ ಹೋರಾಡುವ ಮಾತ್ರೆಗಳನ್ನ ತಯಾರಿಸಲು ಸಾಧ್ಯವಾಗಿಲ್ಲ. ಸದ್ಯ ಈ ವಿಚಾರದಲ್ಲಿ ಮುನ್ನಡೆ ಸಾಧಿಸಿ ಕೊರೊನಾ ವೈರಸ್ ವಿರುದ್ಧ ಮೊದಲ ಮಾತ್ರೆ ರೂಪದ ಔಷಧಿ ತಯಾರಿಸಿದ ಹೆಗ್ಗಳಿಕೆ ಗಳಿಸಲು ಯುಎಸ್​ ಸರ್ಕಾರ ಹಣದ ಹೊಳೆಯನ್ನೇ ಹರಿಸಲು ಮುಂದಾಗಿದೆ.

The post ಕೊರೊನಾ ಗುಣವಾಗಿಸಲು ಮಾತ್ರೆ ತಯಾರಿಕೆ; ಅಮೆರಿಕಾದಿಂದ ₹22 ಸಾವಿರ ಕೋಟಿ ವೆಚ್ಚ appeared first on News First Kannada.

Source: newsfirstlive.com

Source link