ಆನೆಗೆ ವಯಸ್ಸಾದಂಗೂ ಬೆಲೆ ಜಾಸ್ತಿ ಅಂತೆ.. ಹಂಗೆ ಕಿಚ್ಚ ಸುದೀಪ್ ಅನ್ನೋ ಹೆಸರಿಗೆ ವರ್ಷ ವರ್ಷ ಕಳೆದಂಗೂ ಬೆಲೆ ಮತ್ತು ಸ್ಫೂರ್ತಿಯ ಸೆಲೆ ಅನ್ನೋದು ಹೆಚ್ಚಾಗುತ್ತಿದೆ. ಕಾರಣ ಅವರ ನಡುವಳಿಕೆ ಹಾಗೂ ಹೃದಯ ತುಂಬಿದ ತಿಳುವಳಿಕೆ. ಕೊರೊನಾ ಮಹಾ ಮಾರಿಯನ್ನ ಗೆದ್ದಿರುವ ಕಿಚ್ಚ ಸುದೀಪ್ ತನ್ನ ಕಲಾ ಕನ್ನಡ ಬಳಗಕ್ಕೆ ಆತ್ಮಸ್ಥೈರ್ಯ ತುಂಬುವ ಒಂದು ಮಹತ್ಕಾರ್ಯವನ್ನ ಮಾಡ್ತಿದ್ದಾರೆ.

ಸುದೀಪ್ ಕನ್ನಡ ಚಿತ್ರರಂಗದ ಅಪರೂಪದ ಕಲಾವಿದ. ತಮ್ಮದೇ ಆದ ಸ್ಟೈಲ್ ನಿಂದ ಪ್ರೇಕ್ಷಕರ ಮನಸೂರೆಗೊಂಡವರು ಸುದೀಪ್. ಸುದೀಪ್ ಬೆನ್ನಿಗೆ ಅಭಿಮಾನಿಗಳ ಪಡೆಯೇ ಇರುತ್ತೆ. ಕಿಚ್ಚ ಸುದೀಪ್ ಅವರ ವ್ಯಕ್ತಿತ್ವವೇ ಹೀಗೆ. ಏನಿದ್ದರೂ ನೇರಾ ನೇರ. ಆದರೆ, ಕಿಚ್ಚ ಸುದೀಪ್ ಇತ್ತೀಚೆಗೆ ಮತ್ತೊಂದು ಯುದ್ಧವನ್ನೂ ಗೆದ್ದು ಬಂದಿದ್ದಾರೆ. ಅದೇ ಕೊರೊನಾ ವಿರುದ್ಧದ ಯುದ್ಧ. ಅಂತಹ ಯುದ್ಧ ಗೆದ್ದು ಬಂದವರು ಸುಮ್ಮನೇ ಕುಳಿತುಕೊಳ್ಳಲಿಲ್ಲ. ಈ ಕೊರೊನಾದಿಂದ ತೊಂದರೆಗೊಳಗಾದವರ ನೆರವಿಗೆ ನಿಂತು ಬಿಟ್ಟಿದ್ದಾರೆ. ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟೇ ಇದಕ್ಕೆಲ್ಲ ವೇದಿಕೆ.

ಒಬ್ಬ ಕಲಾವಿದ ಅಂದರೆ ಆತ ಏನೇ ಮಾಡಿದರೂ ತನ್ನೊಳಗೆ ಆವಾಹಿಸಿಕೊಳ್ಳಬೇಕು. ಅಂತಹದ್ದೊಂದು ಮನಸ್ಥಿತಿ ರೂಢಿಸಿಕೊಳ್ಳಬೇಕು. ಯಾವುದೇ ಪಾತ್ರ ಮಾಡಬೇಕಾದರೂ ಅದರಲ್ಲಿ ಮಗ್ನನಾಗಿರಬೇಕು. ಸುದೀಪ್ ಇದರಲ್ಲಿ ನುರಿತರಾದವರು. ಅದಕ್ಕೆ ಸುದೀಪ್ ಇಷ್ಟು ಎತ್ತರಕ್ಕೆ ಬೆಳೆದರು. ಸುದೀಪ್ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಕಾರಣ ಸುದೀಪ್ ಬೆಳೆಸಿಕೊಂಡ ವ್ಯಕ್ತಿತ್ವ. ಅವರಲ್ಲಿರುವ ಮಾನವೀಯ ಗುಣ. ಇಂತಹ ಕೊರೊನಾ ಸಂಕಷ್ಟ ಕಾಲದಲ್ಲಿ ಸುದೀಪ್ ಮಾಡ್ತಾ ಇರೋದು ಒಂದಲ್ಲ ಎರಡಲ್ಲ.

ಕೊರೊನಾ ಗೆದ್ದು ಧೈರ್ಯ ತುಂಬ್ತಿದ್ದಾರೆ ಕಿಚ್ಚ ಸುದೀಪ್

ಸುದೀಪ್ ಕೊರೊನಾ ಗೆದ್ದು ಬಂದರು. ಆದರೆ ತಮ್ಮ ಹಾಗೆ ಯಾರೆಲ್ಲ ಇದ್ದರೋ ಅವರೆಲ್ಲರೂ ಗೆದ್ದು ಬರಬೇಕೆಂಬುದೇ ಇವರ ಆಶಯ. ಹೀಗಾಗಿ ಅವರು ತಮ್ಮ ಅನುಭವಗಳನ್ನೆಲ್ಲ ಈಗಾಗಲೇ ಹಂಚಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು, ಎದೆಗುಂದದೆ ಪರಿಸ್ಥಿತಿ ಎದುರಿಸಬೇಕೆಂದು ಸಂದೇಶ ಕೊಟ್ಟಿದ್ದಾರೆ. ಇದು ಬರೇ ಬಾಯಿ ಮಾತಲ್ಲಿ ಹೇಳಿ ಮುಗಿಸಿಲ್ಲ ಕಿಚ್ಚ ಸುದೀಪ್. ನೇರವಾಗಿ ತಾವೇ ಕೊರೊನಾದಿಂದ ಸಂಕಷ್ಟಕ್ಕೊಳಗಾದವರ ನೆರವಿಗೆ ನಿಂತು ಬಿಟ್ಟಿದ್ದಾರೆ.

ಕಲಾವಿದರ ಆತಂಕ ದೂರ ಮಾಡಲು ಕಿಚ್ಚನ ಸೂತ್ರ..!

“ನಾವೆಲ್ಲ ಕಲಾವಿದರು”, “ಕಲಾವಿದರೆಲ್ಲ ಒಂದೇ ಕುಟುಂಬ ಇದ್ದಂಗೆ” ಅಂತ.. ವರ ನಟ ಡಾ.ರಾಜ್ ಕುಮಾರ್ ಒಂದು ಮಾತನ್ನ ತನ್ನ ಜೀವನದುದ್ದಕ್ಕೂ ಹೇಳುತ್ತಿದ್ದರು.. ಕೊನೆ ಉಸಿರಿರುವ ತನಕ ಕುಟುಂಬದ ಹಿರಿಯಣ್ಣನ ರೀತಿ ಇದ್ದು ಆದರ್ಶ ತುಂಬಿದ ಬಂಗಾರದ ಇತಿಹಾಸವಾದ್ರು. ಇವತ್ತು ಕಲಾವಿದರು ಈ ಪಾಪಿ ಕಾಣದ ಕೊರೊನಾದಿಂದ ದೂರ ದೂರ ಉಳಿಸಿದ್ದಾರೆ, ಬಣ್ಣವಿಲ್ಲದೆ ಕಲಾ ಪೆಟ್ಟಿಗೆಗೆ ಬೀಗ ಹಾಕಿ ಮನೆಯಲ್ಲಿ ಕುಳಿತಿದ್ದಾರೆ. ಕೊರೊನಾ ಮಹಾ ಮಾರಿಯ ಕರಿ ಛಾಯೆ ಏನು ಎಂಬುದನ್ನ ಸ್ವತಃ ಅನುಭವಿಸಿರುವ ಅಭಿನಯ ಚಕ್ರವರ್ತಿ ಬಾದ್​​ ಶಾ ಕಿಚ್ಚ ಸುದೀಪ್ ಕೊರೊನಾ ವಿರುದ್ದ ಹೋರಾಟಕ್ಕೆ ಇಳಿಸಿದ್ದಾರೆ. ಕೊರೊನಾಸುರ ಎದುರು ಮಾನವೀಯತೆ ಅಸ್ತ್ರವನ್ನ ಪ್ರಯೋಗಿಸಿದ್ದಾರೆ.

ಸದಾ ಸಂಘ ಜೀವಿಯಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಸುದೀಪ್ ಒಬ್ಬಂಟಿಯಾಗಿ 15ಕ್ಕೂ ಹೆಚ್ಚು ದಿನ ಕಳೆಯುವ ಮಟ್ಟಕ್ಕೆ ಮಾಡಿ ಬಿಟ್ಟಿತ್ತು ಕೊರೊನಾ. ಈ ಟೈಮ್​​ನಲ್ಲಿ ಕೊರೊನಾ ಸೋಂಕಿತರಿಗೆ ಮಾತ್ರೆಗಿಂತ ಆತ್ಮಸ್ಥೈರ್ಯ ಮುಖ್ಯ , ತನ್ನ ಜೊತೆಗಿರೋರ ಒಳ್ಳೆ ಮಾತು ಮುಖ್ಯ ಅನ್ನೋದನ್ನ ಸ್ಪಷ್ಟವಾಗಿ ಅರಿತಿರುವ ಕಿಚ್ಚ ಸುದೀಪ್ ತಮ್ಮದೇ ಆದ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್​​ ವತಿಯಿಂದ ಮಹತ್ಕಾರ್ಯವನ್ನ ಮಾಡಲು ಹೊರಟಿದ್ದಾರೆ.

ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಕಷ್ಟು ಅದ್ಭುತ ಕಾರ್ಯಗಳನ್ನ ಮಾಡುತ್ತ ಬಂದಿರುವ ಸುದೀಪ್ ಆತ್ಮೀಯ ಬಳಗ ಈ ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಫೀಲ್ಡ್​ಗಿಳಿಯಿತು. ತಮ್ಮ ಗಮನದಲ್ಲಿ ಯಾರೇ ಸಂಕಷ್ಟದಲ್ಲಿದ್ದರೂ ಅವರವರ ಸಹಾಯಕ್ಕೆ ಮುಂದೆ ನಿಲ್ತು. ಕೋವಿಡ್ ಪೇಶೆಂಟ್​​​​​​​​​ಗಳಿಗೆ ಬೆಡ್​​ನ ವ್ಯವಸ್ಥೆ, ಜೀವ ವಾಯು ಆಕ್ಸಿಜನ್ ವ್ಯವಸ್ಥೆ, ಔಷಧಿ ಇತ್ಯಾದಿ ಸವಲತ್ತನ ಯಶಸ್ವಿಯಾಗಿ ಮಾಡಿದೆ ರನ್ನನ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್​.

ಕಣ್ಣಿಗೆ ಕಾಣಿಸುವ ಸಮಸ್ಯೆಗಳ ವಿರುದ್ಧ ಮನುಷ್ಯ ಸಾವಿರಾರು ವರ್ಷಗಳಿಂದ ಹೋರಾಡಿ ಜಯಿಸಿ ತನ್ನದೇ ಆದ ಪಾರುಪತ್ಯವನ್ನ ಸಾಧಿಸುತ್ತಾ ಬಂದಿದ್ದ. ಆದ್ರೆ ಈ ಕಾಣದ ಶಕ್ತಿಗಳ ವಿರುದ್ಧ ಯಾವಾಗಲೂ ಮನುಷ್ಯನ ಪರ್ಫಾರ್ಮೆನ್ಸ್ ಕೊಂಚ ಡಲ್ಲೇ ಅಂತ ಹೇಳ ಬಹುದು. ಈ ಕೊರೊನಾ ವಿಚಾರದಲ್ಲಿಯೂ ಆಗಿರೋದು ಅದೇ. ಇವತ್ತಿದ್ದೋನು ನಾಳೆ ಇಲ್ಲ, ಮೊನ್ನೆ ಮೊನ್ನೆ ಚೆನ್ನಾಗಿಯೇ ಇದ್ದವನು ಇವತ್ತು ಇಲ್ಲ ಅನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಕಾರಣ ಕೊರೊನಾ.

ಬದುಕಿನ ಸವಾಲಿಗೆ ಮಾನವೀಯತೆಗಿಂತ ದೊಡ್ಡ ಬ್ರಹ್ಮಾಸ್ತ್ರ ಇನ್ನೊಂದಿಲ್ಲ. ಕಾಲ ಕಾಲಕ್ಕೂ ಇದು ಸಾಬೀತಾಗುತ್ತಲೇ ಬರುತ್ತಿದೆ. ಮಾಯಾವಿ ಕೊರೊನಾ ವಿರುದ್ಧ ಮನುಜ ಕುಲ ಸಮರವನ್ನೇ ಸಾರಿದೆ. ಕಳೆದ ಒಂದು ವರ್ಷದಿಂದ ಈ ಮಹಾಸಮರ ಮುಂದುವರೆದಿದೆ. ನಮ್ಮ ಚಿತ್ರರಂಗದ ಅನೇಕರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ , ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ಹೀಗೆ ಅನೇಕರು ಗೊತ್ತಿಲ್ಲದಂತೆ ತಮ್ಮದೇ ಆದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉಸಿರು- ಕೋವಿಡ್ ಆಕ್ಸಿಜನ್ ಸೆಂಟರ್ ಸೇವೆಗಳ ಜೊತೆಗೆ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಕಲ್ಪನೆಯ ವಿಭಿನ್ನ ಉಪಯುಕ್ತ ಸೇವೆಯೊಂದು ಜನರಿಗೆ ತಲುಪಲು ಸಜ್ಜಾಗಿದೆ.

ಲಾಕ್​ ಡೌನ್ ಆದ ನಂತರ ಕಿಚ್ಚನ ಕೈ ತುತ್ತು ಅನ್ನೋ ವಿಶೇಷ ಪರಿಕಲ್ಪನೆಯ ಮೂಲಕ ಹಸಿದವರಿಗೆ ಆಹಾರ, ಕೊರೊನಾ ವಾರಿಯರ್ಸ್​ಗಳಿಗೆ ಆಹಾರ, ಕೊರೊನಾ ಸೋಂಕಿತರಿಗೆ ಆಹಾರದ ವ್ಯವಸ್ಥೆಯನ್ನ ಮಾಡಿಕೊಂಡು ಬಂದಿರುವ ಕಿಚ್ಚನ ಚಾರಿಟೇಬಲ್ ಟ್ರಸ್ಟ್ ಈ ಬಾರಿ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಕೊರೊನಾಕ್ಕೆ ಮನುಷ್ಯತ್ವ ಮದ್ದು ಕೊರೊನಾಕ್ಕೆ ಸ್ನೇಹ ಸಹಕಾರದ ತತ್ವ ಗುದ್ದು ಸಾರಿದೆ ಕಿಚ್ಚನ ಸ್ನೇಹ ಬಳಗ..

ನೀವೂ ನಮ್ಮ ಕುಟುಂಬದಲ್ಲೊಬ್ಬರು ಎಂದಿದ್ಯಾರಿಗೆ ‘ರನ್ನ’?

ಡಾ.ರಾಜ್ ಕುಮಾರ್ ಹೇಳಿದಂತೆ ಕಲಾವಿದರೆಂದ್ರೆ ಒಂದೇ ಕುಟುಂಬ ಇದ್ದಂಗೆ ಅನ್ನೋ ಮಾತನ್ನ ಸುದೀಪ್ ಪಾಲಿಸುತ್ತಿದ್ದಾರೆ. ಕಿಚ್ಚ ಸುದೀಪ್ ಕನ್ನಡ ಪೋಷಕ ನಟ-ನಟಿಯರಿಗೆ ಮನದಾಳದ ಪತ್ರ ಬರೆದಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿಚ್ಚ ಸುದೀಪ್ ಸ್ಯಾಂಡಲ್​ವುಡ್ ಹಿರಿಯ ಪೋಷಕ ನಟ ಮತ್ತು ನಟಿಯರ ಆರೋಗ್ಯ ವಿಚಾರಿಸಿ ಹೆಲ್ದಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ಕನ್ನಡ ಪೋಷಕ ಕಲಾವಿದರಿಗೆ ಕಿಚ್ಚನ ಯೋಗಕ್ಷೇಮದ ಪತ್ರ ತಲುಪಿದೆ. ಕಿಚ್ಚನ ಬಳಗ ಮಿಟ್ ಮಾಡುವ ಕಲಾವಿದರೇನಾದ್ರು ಕಷ್ಟದಲ್ಲಿ ಇದ್ದಾರೆಂದು ಎಂದು ತಿಳಿದು ಬಂದ್ರೆ ಅವ್ರಿಗೆ ಸಹಾಯ ಮಾಡಲು ಮುಂದಾಗಲಿದೆ ಕಿಚ್ಚ ಸುದೀಪ ಚಾರಿಟೆಬಲ್ ಟ್ರಸ್ಟ್.

ಹಿರಿಯ ನಟರಾದ ಅರವಿಂದ್, ಎಮ್ ಎನ್ ಸುರೇಶ್, ಆರ್.ಟಿ ರಾಮ, ಆಶಾ ಲತಾ, ಪುಷ್ಪಾ ಸ್ವಾಮಿ, ಶೈಲಾ ಸುದರ್ಶನ್, ಸುಲೋಚನಾ, ಮಾಲತಿ ಮೈಸೂರು, ಸಿತಾರಾ, ಶ್ರೀನಿವಾಸ್ ಮೂರ್ತಿ, ಬೆಂಗಳೂರು ನಾಗೇಶ್, ಹೊನ್ನವಳ್ಳಿ ಕೃಷ್ಣ, ಅರಸೀಕೆರೆ ರಾಜು ಮುಂತಾದ ಕಲಾವಿದರನ್ನ ಸುದೀಪ್ ಸ್ನೇಹ ಬಳಗ ಮೀಟ್ ಆಗಿ ಉಡುಗೊರೆ ಜೊತೆ ಒಂದು ಕಿಚ್ಚನ ಪತ್ರವನ್ನ ತಲುಪಿಸಿ ನಿಮ್ಮ ಜೊತೆಗೆ ನಾವಿದ್ದೇವೆ ಏನಿದ್ದರೂ ಹೇಳಿ ಎಂಬುವ ಆತ್ಮವಿಶ್ವಾಸದ ಮಾತುಗಳನ್ನ ಆಡಿದ್ದಾರೆ.

ಇದಲ್ವೇ ಅದ್ಭುತ ಕಾರ್ಯ.. ಇಂತಹ ಟೈಮ್​​ನಲ್ಲಿ ಒಬ್ಬರಿಗೊಬ್ಬರು ಆಗಬೇಕು ಈ ಕೊರೊನಾ ವನ್ನ ತೊಲಗಿಸಬೇಕು..ಮಾನವಿಯತೆಯೇ ಕೊರೊನಾಸುರನ ಸಂಹಾರಕ್ಕೆ ಅಸ್ತ್ರವಾಗಬೇಕು.. ಚಿತ್ರರಂಗದ ಅನೇಕ ಕಲಾಬಂಧುಗಳು ತಮ್ಮ ತಮ್ಮ ಕೈಲಾದ ಕೆಲಸ ಕಾರ್ಯಗಳನ್ನ ಮಾಡ್ತಿದ್ದಾರೆ. ಸುದೀಪ್ ಅವರ ಈ ಆತ್ಮವಿಶ್ವಾದ ಕೆಲಸಕ್ಕೆ ಕನ್ನಡ ಚಿತ್ರರಂಗ ಹೆಮ್ಮೆ ಪಡ್ತಿದೆ.

The post ಕೊರೊನಾ ಗೆದ್ದು ಬಂದ ಸುದೀಪ್.. ನೀವೂ ನಮ್ಮ ಕುಟುಂಬದಲ್ಲೊಬ್ಬರು ಎಂದಿದ್ಯಾರಿಗೆ? appeared first on News First Kannada.

Source: newsfirstlive.com

Source link