ವಾರದ ಹಿಂದೆ ಬಾಲಿವುಡ್​ ನಟಿ ಕಂಗನಾ ರಣೌತ್​ಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು. ಕೊರೊನಾ ಪಾಸಿಟಿವ್​ ಬಂದಿದ್ದೇ ತಡ, ಪೋಸ್ಟ್​ ಹಾಕಿ ತಿಳಿಸಿದ್ದ ಕಂಗನಾ ಕೊರೊನಾ ವೈರಸ್​ ತಮ್ಮ ದೇಹದಲ್ಲಿ ಪಾರ್ಟಿ ಮಾಡ್ತಿರುವ ಬಗ್ಗೆ ತಮಗೆ ಅರಿವೇ ಆಗಿಲ್ಲ..ಆದ್ರೆ ಇದೊಂದು ಸಣ್ಣ ಜ್ವರ, ಇದನ್ನ ಗೆಲ್ಲುತ್ತೇನೆ ಅಂತ ಹೇಳಿದ್ದರು. ಅದರಂತೆ ಕಂಗನಾಗೆ ಕೊರೊನಾ ನೆಗೆಟಿವ್​ ಬಂದಿದ್ದು, ಈ ಖುಷಿ ವಿಚಾರವನ್ನೂ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಆದ್ರೆ ಕೊರೊನಾ ಗೆದ್ದ ಕ್ವೀನ್,​ ನೆಗೆಟಿವ್​ ಬಂದ ಸುದ್ದಿ ಹಂಚಿಕೊಳ್ಳುವ ಭರದಲ್ಲಿ ಕೋವಿಡ್​ ಫ್ಯಾನ್​ ಕ್ಲಬ್​ಗಳಿಗೆ ನೋವಾಗುವಂತೆ ನಡೆದುಕೊಂಡಿದ್ದಾರೆ. ಹೌದು.. ಹೀಗಂತ ಕಂಗನಾ ಪೋಸ್ಟ್​ನಲ್ಲೇ ತಿಳಿಯುತ್ತಿದೆ. ವಾರದ ನಂತರ ಕೊರೊನಾ ರಿಪೋರ್ಟ್​​ ನೆಗೆಟಿವ್​ ಬಂದಿರೋದನ್ನ ಖುಷಿಯಿಂದಲೇ ಹಂಚಿಕೊಂಡ ಕಂಗನಾ, ತಮ್ಮ ಪೋಸ್ಟ್​ ಮೂಲಕ ಕೋವಿಡ್​ ಫ್ಯಾನ್​ ಕ್ಲಬ್​ಗಳಿಗೆ ಬಿಸಿ ಶಾಖ ನೀಡಿದ್ದಾರೆ. ಯೆಸ್​.. ಕಂಗನಾ ತಾವು ಮಾತನಾಡುವ ಎಲ್ಲಾ ವಿಷಯಗಳಲ್ಲೂ ಏನಾದರೊಂದು ಒಳ ಅರ್ಥ ಇದ್ದೇ ಮಾತನಾಡುತ್ತಾರೆ. ಅದೆಷ್ಟೋ ಬಾರಿ ಕಂಗನಾ ವ್ಯಂಗ್ಯವಾಗಿ ಮಾತನಾಡ್ತಿದ್ದಾರೆ ಅನ್ನೋದು ಅರಿವಿಗೇ ಬಂದಿರೋದಿಲ್ಲ.

ಅಂದ್ಹಾಗೆ ಕಂಗನಾ ರಣೌತ್ ಕೊರೊನಾ ರಿಪೋರ್ಟ್​ ನೆಗೆಟಿವ್​ ಬಂದಿರೋದನ್ನ ಖುಷಿಯ ಜೊತೆಗೆ ವ್ಯಂಗ್ಯವಾಗಿಯೂ ಶೇರ್​ ಮಾಡ್ಕೊಂಡಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ಕೊರೊನಾ ಪಾಸಿಟಿವ್​ ಆಗಿದ್ದ ನಾನು ಇಂದು ಗುಣಮುಖಳಾಗಿ ನೆಗೆಟಿವ್​ ರಿಪೋರ್ಟ್​ ಪಡೆದುಕೊಂಡಿದ್ದೇನೆ. ನಾನು ಈ ಕೋವಿಡ್​ ಸಂದರ್ಭದಲ್ಲಿ ಏನು ಮಾಡಿದೆ, ಹೇಗೆ ಕೊರೊನಾ ಗೆದ್ದೆ ಅನ್ನೋ ಬಗ್ಗೆ ಬಹಳಷ್ಟು ನಿಮ್ಮೆಲ್ಲರಲ್ಲೂ ಹಂಚಿಕೊಳ್ಳಬೇಕು. ಆದ್ರೆ ನಾನು ಯಾವುದೇ ಕೋವಿಡ್​ ಫ್ಯಾನ್​ ಕ್ಲಬ್​​ಗಳಿಗೆ ನೋವು ಮಾಡಬಾರದೆಂದು ತಿಳಿದಿದ್ದೇನೆ. ಯೆಸ್.. ಅದೆಷ್ಟೋ ಜನರಿಗೆ ನಾವು ಕೊರೊನಾ ವೈರಸ್​ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ನೋವಾಗುತ್ತೆ. ಕೊರೊನಾ ವೈರಸ್​​ಗೆ ಅಗೌರವ ಕೊಟ್ಟು ಮಾತನಾಡಿದ್ರೂ ಕೋಪ ಮಾಡಿಕೊಳ್ತಾರೆ. ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಗೆ ನಾನು ಚಿರಋಣಿ’ ಅಂತ ಬರೆದು ಕೊರೊನಾ ವೈರಸ್​ ಹರಡುತ್ತಿರೋದನ್ನ ಖುಷಿಯಿಂದಲೇ ಸ್ವೀಕರಿಸಿರೋ ಜನರಿಗೆ ಮೊಟಕಿದ್ದಾರೆ.

The post ಕೊರೊನಾ ಗೆದ್ದ ಕ್ವೀನ್; ಕೋವಿಡ್​ ಫ್ಯಾನ್​ ಕ್ಲಬ್ಸ್​​​​ ಮನಸ್ಸು ನೋಯಿಸಿದ್ರಾ ಕಂಗನಾ?! appeared first on News First Kannada.

Source: newsfirstlive.com

Source link