ಕೊರೊನಾದ ಎರಡನೇ ಅಲೆಯನ್ನ ದೆಹಲಿ ಸಂಪೂರ್ಣವಾಗಿ ಮಣಿಸಿದಂತೆ ಕಾಣ್ತಿದೆ. ಕಳೆದ 24 ಗಂಟೆಯಲ್ಲಿ ಕೇವಲ 414 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಕೊರೊನಾ ನಿಯಂತ್ರಣ ವಿಚಾರದಲ್ಲಿ ದೆಹಲಿ ಹೊಸ ದಾಖಲೆಯನ್ನ ಬರೆದಿದೆ.

ಇನ್ನು ದೆಹಲಿಯಲ್ಲಿ ಸಕ್ರಿಯ ಪ್ರಕರಣ 6,731 ರಷ್ಟಿದ್ದು, ಪಾಸಿಟಿವಿಟಿ ರೇಟ್​ ಶೇಕಡಾ 0.53ಕ್ಕೆ ಬಂದು ತಲುಪಿದೆ. ಕಳೆದ ಮಾರ್ಚ್​​ 10 ರಂದು ಅತೀ ಕಡಿಮೆ ಅಂದ್ರೆ 368 ಸೋಂಕಿನ ಪ್ರಕರಣಗಳು ದಾಖಲಾಗಿದ್ದವು. ಅಂದು ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 0.52ಕ್ಕೆ ಇತ್ತು.

ದೆಹಲಿಯಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 14,28,863 ಏರಿಕೆಯಾಗಿದೆ. ಹಾಗೇ ಇಂದು 60 ಮಂದಿ ಸೋಕಿತರು ಸಾವನ್ನಪ್ಪಿದ್ದು, ಇದುವರೆಗೂ 24,557 ಮಂದಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ. ಇನ್ನು ಇಂದು 77,694 ಮಂದಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು.

ಕೊರೊನಾ ಎರಡನೇ ಅಲೆಯಿಂದ ಸದ್ಯಕ್ಕೆ ನಿರಾಳವಾಗಿರುವ ದೆಹಲಿ ಸರ್ಕಾರ ಇದೀಗ ಮೂರನೇ ಅಲೆಯನ್ನ ಎದುರಿಸಲು ಸಕಲ ಸಿದ್ಧತೆಯನ್ನ ನಡೆಸುತ್ತಿದೆ. ಕೊರೊನಾದ ಎರಡನೇ ಅಲೆಯನ್ನ ಎದುರಿಸಿದ ಮಾದರಿಯಲ್ಲೇ ಮೂರನೇ ಅಲೆಯನ್ನ ಎದುರಿಸಲಾಗುವುದು. ಅದರಂತೆ ಎಲ್ಲಾ ರೀತಿಯ ಸಿದ್ಧತೆಯನ್ನೂ ನಾವು ಮಾಡಿಕೊಂಡಿದ್ದೇವೆ. ಮೂರನೇ ಅಲೆಯಲ್ಲಿ ಪ್ರತಿನಿತ್ಯ 37 ಸಾವಿರ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇದ್ದು, ಅದನ್ನ ಎದುರಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

The post ಕೊರೊನಾ ಗೆದ್ದ ದೆಹಲಿ.. ಇಂದು ಕೇವಲ 414 ಕೇಸ್​ appeared first on News First Kannada.

Source: newsfirstlive.com

Source link