ರಾಯಚೂರು: ಕೊರೊನಾ ತಡೆಗೆ ಲಾಕ್​ಡೌನ್​​ ಅಗತ್ಯವಾಗಿದ್ದು, ಇದನ್ನ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ ಕೊರೊನಾದ ಚೈನ್​ ಲಿಂಕ್ ತಪ್ಪಿಸಲು ಸಂಚಾರ ಸ್ತಬ್ಧವಾಗಬೇಕಿದೆ. ಜನರ ಅನಾವಶ್ಯಕ ಓಡಾಟ, ಸಭೆ, ಸಮಾರಂಭಗಳನ್ನ ಬಂದ್ ಮಾಡಬೇಕಿದೆ ಎಂದರು. ಲಾಕ್​ಡೌನ್​ ಎಂದು ಕರೆಯದಿದ್ದರೂ, ಸರ್ಕಾರ ವಿಧಿಸಿರೋ ನಿಯಮಗಳು ಲಾಕ್​ಡೌನ್ ಸ್ವರೂಪದಲ್ಲಿಯೇ ಇವೆ. ಸಾಮಾಜಿಕ ಅಂತರ ಪಾಲನೆ ಹಾಗೂ ಕಡ್ಡಾಯವಾಗಿ ಮಾಸ್ಕ್​ ಧರಿಸುವುದರೊಂದಿಗೆ ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ಸವದಿ ಮನವಿ ಮಾಡಿದರು.

ಇನ್ನು ಕೊರೊನಾ ವೇಳೆ ಖಾಸಗಿ ವೈದ್ಯರ ಹಣ ವಸೂಲಿ ಆರೋಪದ ಬಗ್ಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ವೈದ್ಯರು ಮಾನವೀಯತೆಯಿಂದ ವರ್ತಿಸಬೇಕು. ವೈದ್ಯರು ಜನರ ಶಾಪಕ್ಕೆ ಗುರಿ ಆಗುವ ಕೆಲಸ ಮಾಡಬಾರದು. ಇಂತಹ ವೇಳೆಯಲ್ಲಿ ವೈದ್ಯರು ನಮ್ಮ ಪಾಲಿನ ದೇವರು. ದೇವರು ನಮಗೆ ಅನ್ಯಾಯ ಮಾಡುವ ಕೆಲಸ ಮಾಡಬಾರದು ಅಂತ ವೈದ್ಯರಲ್ಲಿ ವಿನಂತಿ ಮಾಡಿದರು.

The post ಕೊರೊನಾ ಚೈನ್ ಮುರಿಯಲು ಲಾಕ್​ಡೌನ್​​ ಅಗತ್ಯ, ಬೇರೆ ಮಾರ್ಗವಿಲ್ಲ – ಸಚಿವ ಸವದಿ appeared first on News First Kannada.

Source: newsfirstlive.com

Source link