ನವದೆಹಲಿ: ಕೊರೊನಾ ರೌದ್ರನರ್ತನಕ್ಕೆ ನಲುಗಿರುವ ಭಾರತದಲ್ಲಿ ತಮ್ಮವರನ್ನ ಕಳೆದುಕೊಂಡವರ ಆರ್ತನಾದ ಕೇಳಿಸುತ್ತಿದೆ. ಈ ಸಮಯದಲ್ಲಿ ಕೊರೊನಾ ನಿರ್ವಹಣೆಯ ಜವಾಬ್ದಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನೀಡಿ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮೂಲಕ ಹೊಸ ವಿಷಯವನ್ನು ಸ್ವಾಮಿ ಮುನ್ನಲೆಗೆ ತಂದಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಟ್ವೀಟ್:
ಇಸ್ಲಾಮಿಕ್ ಮತ್ತು ಬ್ರಿಟಿಷರ್ ಒಳನುಗ್ಗುವಿಕೆಯನ್ನ ಭಾರತ ಸಮರ್ಥವಾಗಿ ಎದುರಿಸಿದೆ. ಈಗ ಅದೇ ರೀತಿ ಭಾರತ ಕೊರೊನಾ ವಿರುದ್ಧ ಹೋರಾಡುವ ಅವಶ್ಯಕತೆ ಇದೆ. ಹಾಗಾಗಿ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಮೂಲಕ ಹೊಸ ಅಲೆಯನ್ನ ಎದುರಿಸಬೇಕಿದೆ. ಇಲ್ಲವಾದಲ್ಲಿ ಅದು ಮಕ್ಕಳನ್ನು ಗುರಿಯಾಗಿಸಿಕೊಳ್ಳುವತ್ತ ಸಾಗುತ್ತಿದೆ. ಕೊರೊನಾ ವಿರುದ್ಧ ಸಮರದ ನೇತೃತ್ವವನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪ್ರಧಾನಿಗಳು ನೀಡಬೇಕು. ಪಿಎಂಓ ಮೇಲೆ ಅವಲಂಬನೆ ನಿಷ್ಪ್ರಯೋಜಕ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಗಡ್ಕರಿ ಯಾಕೆ?
ಬೆಳಗ್ಗೆ ಸ್ವಾಮಿಯವರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಂತೆ ಹೊಸ ಚರ್ಚೆಗಳು ಆರಂಭಗೊಂಡಿವೆ. ಪ್ರತಿಯೊಬ್ಬರು ಟ್ವೀಟ್ ಮಾಡುವ ಮೂಲಕ ತಮ್ಮ ಅನಿಸಿಕೆಗಳನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಒಬ್ಬರು ಈ ಜವಾಬ್ದಾರಿ ತೆಗೆದುಕೊಳ್ಳಲು ನಿತಿನ್ ಗಡ್ಕರಿ ಯಾಕೆ ಎಂದು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಸ್ವಾಮಿ ಉತ್ತರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಆಸೆ ನನಗಿಲ್ಲ, ರಾಷ್ಟ್ರದ ಅಭಿವೃದ್ಧಿಯೇ ಮೊದಲ ಆಯ್ಕೆ: ಗಡ್ಕರಿ

ನೆಟ್ಟಿಗರ ಪ್ರಶ್ನೆಗೆ ಉತ್ತರ: ಕೊರೊನಾ ನಿಯಂತ್ರಣಕ್ಕೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆಯನ್ನ ವ್ಯವಸ್ಥಿತವಾಗಿ ನಿರ್ವಹಿಸುವುದು ಅತ್ಯಗತ್ಯ. ಈ ವಿಷಯದಲ್ಲಿ ನಿತಿನ್ ಗಡ್ಕರಿ ಸಮರ್ಥರು. ಮೂಲಭೂತ ಸೌಲಭ್ಯಗಳ ನಿರ್ವಹಣೆಯನ್ನ ಮಾಡಿ ತೋರಿಸಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ಪಿಎಂಓ ಕಾರ್ಯವೈಖರಿಯನ್ನ ಪ್ರಶ್ನೆ ಮಾಡಿದ್ದರು. ಪಿಎಂಓ ಕೇವಲ ಒಂದು ವಿಭಾಗ. ಅಂದ್ರ ಪ್ರಧಾನ ಮಂತ್ರಿಗಳಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ವಂಡರ್‌ಫುಲ್‌ ವರ್ಕ್’ – ರಾಹುಲ್ ಬಳಿಕ ನಿತಿನ್ ಗಡ್ಕರಿ ಕಾರ್ಯಕ್ಕೆ ಸೋನಿಯಾ ಗಾಂಧಿ ಮೆಚ್ಚುಗೆ

The post ಕೊರೊನಾ ಜವಾಬ್ದಾರಿ ಗಡ್ಕರಿಗೆ ನೀಡಿ, PMO ಮೇಲೆ ಅವಲಂಬನೆ ನಿಷ್ಪ್ರಯೋಜಕ: ಸುಬ್ರಮಣಿಯನ್ ಸ್ವಾಮಿ appeared first on Public TV.

Source: publictv.in

Source link