ಚಾಮರಾಜನಗರ: ಜಿಲ್ಲೆಯ ಒಡೆಯರಪಾಳ್ಯ ಬಳಿ ಇರುವ ಟಿಬೆಟಿಯನ್ ನಿರಾಶ್ರಿತರ ಗ್ರಾಮಗಳು ವ್ಯಾಕ್ಸಿನೇಷನ್​​ನಲ್ಲಿ ಮಾದರಿಯಾಗಿವೆ.

ಕೋವಿಡ್ ಲಸಿಕೆ ಬಗ್ಗೆ ಹೆಚ್ಚು ಜಾಗೃತರಾಗಿರುವ ನಿರಾಶ್ರಿತ ಟಿಬೆಟಿಯನ್ಸ್ ಪೈಕಿ ಶೇಕಡಾ 100% ನಷ್ಟು ಜನರೂ ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 3,500 ಜನಸಂಖ್ಯೆ ಇರುವ 22 ಟಿಬೆಟಿಯನ್ ಗ್ರಾಮಗಳಲ್ಲಿ 45 ರಿಂದ 59 ವರ್ಷ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಲಾಗಿದೆ.

45 ರಿಂದ 59 ವರ್ಷದ 360 ಮಂದಿಗೆ, 60 ವರ್ಷ ಮೇಲ್ಪಟ್ಟ 570 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. 18 ರಿಂದ 44 ವರ್ಷದ 982 ಜನರ ಪೈಕಿ 803 ಮಂದಿಗೆ ವ್ಯಾಕ್ಸಿನೇಷನ್‌ ಶೇಕಡಾ 81 ವ್ಯಾಕ್ಸಿನೇಷನ್ ಆಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿರುವ ಟಿಬೆಟಿಯನ್ ಗ್ರಾಮಗಳು ಕೊರೊನಾ ಮುಕ್ತವಾಗುತ್ತ ಬಂದಿವೆ.

ಇಲ್ಲಿರುವ 138 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 137 ಮಂದಿ ಗುಣಮುಖರಾಗಿದ್ದರು. ಪಾಸಿಟಿವ್ ಆಗಿದ್ದವರಿಗೆ ಕಮ್ಯುನಿಟಿ ಕೇರ್ ಸೆಂಟರ್​​ನಲ್ಲಿ ಚಿಕಿತ್ಸೆ ನೀಡಲಾಗಿತ್ತು‌. ಇನ್ನು ಇಲ್ಲಿ ಕೋವಿಡ್ ಮರಣ ಪ್ರಮಾಣ ಶೂನ್ಯವಾಗಿದೆ. ಅಲ್ಲದೇ ಹೊರಗಿನಿಂದ ಬರುವ ಟಿಬೆಟಿಯನ್​​ರಿಗೆ RTPCR ರಿಪೋರ್ಟ್ ಕಡ್ಡಾಯವಾಗಿದೆ.

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಲಾಕ್​ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಟಿಬೆಟಿಯನ್ಸ್ ಪಾಲಿಸುತ್ತಿದ್ದಾರೆ. ಕೋವಿಡ್ ಜಾಗೃತಿಯಲ್ಲಿ ಸ್ಥಳೀಯರಿಗಿಂತ ಟಿಬೆಟಿಯನ್ಸ್‌ ಒಂದು ಹೆಜ್ಜೆ ಮುಂದೆ ಇದ್ದಾರೆ.

The post ಕೊರೊನಾ ಜಾಗೃತಿಯಲ್ಲಿ ಟಿಬೆಟಿಯನ್ಸ್ ಮಾದರಿ.. ಈ ಗ್ರಾಮಗಳಲ್ಲಿ ವ್ಯಾಕ್ಸಿನೇಷನ್ ಸಕ್ಸಸ್​ appeared first on News First Kannada.

Source: newsfirstlive.com

Source link