ಕೊಪ್ಪಳ: ಕೊರೊನಾ ಎರಡನೇ ಅಲೆ ಭಯಂಕರವಾಗಿದ್ದು, ಇದನ್ನ ಎದುರಿಸಲು ಅನುಭವಿ ವೈದ್ಯರಿಗೂ ದೊಡ್ಡ ಚಾಲೆಂಜ್ ಆಗಿದೆ.  ಕೊರೊನಾ ಕಟ್ಟಿಹಾಕಲು ವೈದಕೀಯ ಜಗತ್ತೆ ತಲೆ ಕೆಡಿಸಿಕೊಂಡಿದೆ. ಆದ್ರೆ ವೈದ್ಯಕೀಯ ಅನುಭವವಿಲ್ಲದ ಕೆಲ ನಕಲಿ ವೈದ್ಯರು ಮಾತ್ರ ಜನರ ಪ್ರಾಣದ ಜೊತೆ ಚೆಲ್ಲಾಟವಾಡ್ತಿರೋದು, ಆತಂಕಕ್ಕೀಡು ಮಾಡಿದೆ.

ಕೊಪ್ಪಳ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗ್ತಿವೆ. ಕೊರೊನಾವನ್ನ ಕಂಟ್ರೋಲ್ ಮಾಡಲು ಜಿಲ್ಲಾಡಳಿತವೂ ಸಹ ಸಾಕಷ್ಟು ತಲೆ ಕೆಡಿಸಿಕೊಂಡಿದೆ. ಆದ್ರೆ ಸೋಂಕಿತರ ಪತ್ತೆ ಮಾತ್ರ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದಕ್ಕೆ ಮುಖ್ಯ ಕಾರಣ. ನಕಲಿ ಕ್ಲಿನಿಕ್​​ಗಳು ಜಿಲ್ಲೆಯಲ್ಲಿ ತಲೆ ಎತ್ತಿವೆ. ಕೆಮ್ಮು, ನೆಗಡಿ, ಜ್ವರ, ತಲೆನೋವು ಬಂದವ್ರಿಗೂ ಈ ನಕಲಿ ವೈದ್ಯರು ಚಿಕಿತ್ಸೆ ನೀಡ್ತಿದ್ರು. ಆದ್ರೆ ಇವರು ವೈದ್ಯಕೀಯ ಪದವಿ ಪಡೆದ ಡಾಕ್ಟರ್ಸ್​ಗಳಲ್ಲ. ಬದಲಾಗಿ ನಕಲಿ ಡಾಕ್ಟರ್ ಸರ್ಟಿಫಿಕೆಟ್ ಇಟ್ಕೊಂಡು, ಕ್ಲಿನಿಕ್ ನಡೆಸ್ತಿದ್ದ  ವೈದ್ಯರು. ಕೊನೆಗೂ ಎಚ್ಚೆತ್ತ ಕೊಪ್ಪಳ ಜಿಲ್ಲಾಡಳಿತ ನಕಲಿ ಕ್ಲಿನಿಕ್​​ಗಳ ಮೇಲೆ ದಾಳಿ ನಡೆಸಿ, ಸೀಜ್ ಮಾಡಿದೆ.

ನಿನ್ನೆಯಷ್ಟೇ ತಾಲೂಕಿನ ಕುಷ್ಟಗಿಯ ತಾವರಗೇರಾದಲ್ಲಿ 3 ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದೆ. ಗುರುಕೃಪ, ವಿಜಯ, ಸಂಗಮೇಶ್ವರ ಎಂಬ ನಕಲಿ ಕ್ಲಿನಿಕ್ ಮೇಲೆ ರೇಡ್ ನಡೆದಿದೆ. ಕೊಪ್ಪಳ ತಹಶೀಲ್ದಾರ್ ಶರಣಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿಯಲ್ಲಿ ನಕಲಿ ವೈದ್ಯರಾದ ಶರಣಪ್ಪ, ರಫಿಕ್, ರಮೇಶ್ ಎಂಬುವವರನ್ನ ಬಂಧಿಸಲಾಗಿದೆ. ಇವರ ವಿರುದ್ಧ ಸಂಕ್ರಾಮಿಕ ಹಾಗೂ ವಿಪತ್ತು ನಿರ್ವಹಣೆ-2005ರ ಅಡಿಯಲ್ಲಿ ಕೇಸ್ ದಾಖಲಾಗಿದೆ. ಕೆಮ್ಮು, ನೆಗಡಿ, ಜ್ವರ, ತಲೆನೋವು ಪೀಡಿತ ಜನರಿಗೆ ನಕಲಿ ವೈದ್ಯರು ಚಿಕಿತ್ಸೆ ನೀಡ್ತಿದ್ರು. ಇದ್ರಿಂದ ಜಿಲ್ಲಾಡಳಿತಕ್ಕೆ ಕೊರೊನಾ ಸೋಂಕಿತರನ್ನ ಪತ್ತೆ  ಹಚ್ಚಲು ದೊಡ್ಡ ತಲೆನೋವಾಗಿತ್ತು. ಕೊನೆಗಳಿಗೆಯಲ್ಲಿ ಜಿಲ್ಲಾಸ್ಪತ್ರೆ ಮತ್ತು ತಾಕೂಕು ಆಸ್ಪತ್ರೆಗೆ ಸೋಂಕಿತರು ಬಮದು ಸೇರ್ತಿದ್ರು. ಆಮೇಲೆ ಚಿಕಿತ್ಸೆ ಫಲಕಾರಿಯಾಗದೆ ಕೊರೊನಾ ಸೋಂಕಿತರು ಸಾವನ್ನಪ್ತಿದ್ರು.

ಒಟ್ಟಾರೆ, ಕೊರೊನಾ ಎರಡನೇ ಅಲೆ ಮತ್ತು ಮುಂಬರೋ ಮೂರನೇ ಅಲೆ ಎದುರಿಸಲು ಇಡೀ ವೈದ್ಯಕೀಯ ಲೋಕ‌ವೇ ತಲೆ ಕೆಡಿಸಿಕೊಂಡಿದೆ. ಜನ್ರನ್ನ ಕೋವಿಡ್​ನಿಂದ ರಕ್ಷಿಸಲು ವೈದ್ಯರು ಹರಸಾಹಸಪಡ್ತಿದ್ದಾರೆ. ಆದ್ರೆ ಕೆಲ ನಕಲಿ ವೈದ್ಯರು ಈ ರೀತಿ ಹಣದಾಸೆಗೆ, ಕೊರೊನಾ ಸೋಂಕಿತರಿಗೂ ಇಲ್ಲಸಲ್ಲದ ಚಿಕಿತ್ಸೆ ನೀಡಿ, ದಾರಿ ತಪ್ಪಿಸಿ ಕೊನೆಗೆ ಅವರ ಜೀವಕ್ಕೆ ಆಪತ್ತು ತಂದಿಡ್ತಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

The post ಕೊರೊನಾ ಜೊತೆಗೇ ಹುಟ್ಟಿಕೊಂಡಿದ್ದಾರೆ ನಕಲಿ ಡಾಕ್ಟರ್ಸ್.. ಇಂದು ಮೂವರು ಅರೆಸ್ಟ್ appeared first on News First Kannada.

Source: newsfirstlive.com

Source link