ಚಿಕ್ಕಮಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಕಾಫಿನಾಡಿನ ಅಧಿಕಾರಿಗಳು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಂತವೇರಿ ಬಳಿ, ಪಾರ್ಟಿಗೆಂದು ತೆರಳಲು ಹೊರಟಿದ್ದ ಅರಣ್ಯಾಧಿಕಾರಿಗಳಿಗೆ ತಡೆ ಹಾಕಿ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡಿದ್ದಾರೆ.

ನಿನ್ನೆ ಹಿರಿಯ ಅಧಿಕಾರಿಗಳ ತಂಡ  ಹತ್ತಕ್ಕೂ ಹೆಚ್ಚು ಕಾರು-ಜೀಪುಗಳಲ್ಲಿ ಚಿಕ್ಕಮಗಳೂರಿನಿಂದ ಸಂತವೇರಿ ಸಮೀಪದ “ಗೇಮ್ ಫಾರೆಸ್ಟ್”ಗೆ ಹೊರಟಿತ್ತು. ಈ ವೇಳೆ ವಾಹನಗಳನ್ನ ತಡೆದ ಗ್ರಾಮಸ್ಥರು, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಇದೆ. ಗಾಡಿಗಳನ್ನ ಬಿಡಬೇಡಿ ಅಂತ ಜಿಲ್ಲಾಧಿಕಾರಿ ಹೇಳಿದ್ದಾರೆ. ಒಂದೋ ಎರಡೋ ಗಾಡಿಗಳು ಹೋದ್ರೆ ಪರವಾಗಿಲ್ಲ. ಆದ್ರೂ 10-15 ಗಾಡಿಗಳು ಹೋಗ್ತಿವೆ. ಕೊರೊನಾ ಟೈಮಿನಲ್ಲಿ ನಿಮಗೆ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿದ್ದಾರೆ.

ಗ್ರಾಮಸ್ಥರು ಘೇರಾವ್ ಹಾಕಿದ ಹಿನ್ನೆಲೆ ಬೇರೆ ದಾರಿ ಕಾಣದೇ ಅಧಿಕಾರಿಗಳು ವಾಪಸ್ ಆಗಿದ್ದಾರೆ.

 

The post ಕೊರೊನಾ ಟೈಮಲ್ಲಿ ಮೋಜು ಮಸ್ತಿ ಬೇಕಾ.. ಅಧಿಕಾರಿಗಳ 10ಕ್ಕೂ ಹೆಚ್ಚು ಕಾರ್ ತಡೆದು ಗ್ರಾಮಸ್ಥರ ಆಕ್ರೋಶ appeared first on News First Kannada.

Source: newsfirstlive.com

Source link