ಕೋವಿಡ್​​-19 ಎರಡನೇ ಅಲೆಯಿಂದ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಕಳೆದ ಎರಡು ವರ್ಷಗಳಿಂದ ಮಕ್ಕಳು ಸರಿಯಾಗಿ ಶಾಲೆಗೆ ಹೋಗಿ ಕಲಿತಿದ್ದೇ ಕಡಿಮೆ. ಕೆಲವು ಖಾಸಗಿ ಶಾಲೆಗಳು ಆನ್ಲೈನ್​​​ ಕ್ಲಾಸ್ ಮೊರೆಹೋಗಿವೆ​​. ಪೋಷಕರಂತೂ ಮಕ್ಕಳ ಫೀಸ್​ ಕಟ್ಟಲಾಗದೇ ಸಂಪಾದನೆಯೂ ಇಲ್ಲದೇ ಬೇಸತ್ತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲೂ ಬೆಂಗಳೂರಿನ ಖಾಸಗಿ ಶಾಲೆಯೊಂದು 1 ಲಕ್ಷಕ್ಕೂ ಅಧಿಕ ಫೀಸ್​​ ಹೆಚ್ಚಿಸಿದೆ.

ನಗರದ ಪ್ರತಿಷ್ಠಿತ ನಾರಾಯಣ ಓಲಂಪಿಯಡ್ ಶಾಲೆಯು ಈ ವರ್ಷ ಸುಮಾರು 1 ಲಕ್ಷ 23 ಸಾವಿರದ 500 ರೂ ಹೆಚ್ಚಿಸಿದೆ. ಪೋಷಕರು ಮಕ್ಕಳ ಫೀಸ್​​ ಕಟ್ಟಲು ಕಂಗಾಲಾಗಿ ಹೋಗಿದ್ದಾರೆ. ಸರಿಯಾಗಿ ಆನ್​ಲೈನ್​​​ ಕ್ಲಾಸ್​​ ಕೂಡ ತೆಗೆದುಕೊಳ್ಳದೇ​​ ಒಬ್ಬ ವಿದ್ಯಾರ್ಥಿಗೆ ಒಂದು ಲಕ್ಷ ರೂ. ಸಂಗ್ರಹ ಮಾಡಲಾಗುತ್ತಿದೆ. ಹೀಗೆಂದು ವಿದ್ಯಾರ್ಥಿಗಳ ಪೋಷಕರು ನಾರಾಯಣ ಓಲಂಪಿಯಡ್ ಶಾಲೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ತೀವ್ರ ಕೊರೊನಾ ನಡುವೆಯೇ ಮಕ್ಕಳ ಫೀಸ್​​ ಹೆಚ್ಚು ಮಾಡಿದ್ದಾರೆ. ಕಳೆದ ವರ್ಷ ಶೇ.70 ಫೀಸ್ ಕಟ್ಟಿ ಎಂದು ಸರ್ಕಾರ ಹೇಳಿತ್ತು. ಆದರೀಗ, ಖಾಸಗಿ ಶಾಲೆಯವರು ಸರ್ಕಾರದ ಶೇ.70 ಫೀಸ್​​ ಜೊತೆಗೆ ಡೊನೇಷನ್ ಕೂಡ ಕೇಳುತ್ತಿದ್ದಾರೆ. ಅಲ್ಲದೇ ಕಳೆದ ವರ್ಷಕ್ಕಿಂತಲೂ ಈ ವರ್ಷ ಶೇ. 40 ಫೀಸ್ ಜಾಸ್ತಿ ಮಾಡಿದ್ದಾರೆ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಫೀಸ್​​ ಕಟ್ಟದೇ ಹೋದಲ್ಲಿ ಮಕ್ಕಳನ್ನು ಪರೀಕ್ಷೆಗೆ ಕೂರಿಸುವುದಿಲ್ಲ. ಕಳೆದ ವರ್ಷ ಮಕ್ಕಳ ಟ್ಯೂಷನ್​ ಫೀಸ್​​ ಒಂದು ಲಕ್ಷ ಇತ್ತು. ಈ ವರ್ಷ ಅದರ ಮೇಲೆ 1,23,500 ರೂ. ಹೆಚ್ಚಿಸಿದ್ದಾರೆ. ಒಬ್ಬೊಬ್ಬರಿಗೆ ಒಂದು ರೀತಿ ಫೀಸ್​ ತೆಗೆದುಕೊಳ್ಳುತ್ತಿದ್ದಾರೆ. ಟಿಸಿ ಕೊಡಿ ಎಂದರೆ ಫುಲ್​ ಫೀಸ್​ ಕಟ್ಟಿ ಎನ್ನುತ್ತಾರೆ. ಸರಿಯಾಗಿ ಆನ್ಲೈನ್​ ಕ್ಲಾಸ್ ಕೂಡ ಮಾಡುತ್ತಿಲ್ಲ ಎನ್ನುತ್ತಾರೆ ಪೋಷಕರು.

The post ಕೊರೊನಾ ಟೈಮ್​ನಲ್ಲೂ ನಿಲ್ಲದ ಖಾಸಗಿ ಶಾಲೆಗಳ ಧನದಾಹ; ಪೋಷಕರಿಂದ ಪ್ರತಿಭಟನೆ appeared first on News First Kannada.

Source: newsfirstlive.com

Source link