ಕೊರೊನಾ ಎರಡನೇ ಅಲೆ ಜಗತ್ತಿನ ನಾನಾ ದೇಶಗಳಲ್ಲಿ ಕಾಣಿಸಿಕೊಳ್ತಿದೆ. ಮೊದಲನೇ ಅಲೆಗಿಂತ ಎರಡನೇ ಅಲೆ, ಅಂದ್ರೆ ಕೋವಿಡ್​ ಮ್ಯೂಟೆಂಟ್​ನಿಂದ ಸಾಕಷ್ಟು ಜನ ಸಾವಿಗೀಡಾಗ್ತಿದ್ದಾರೆ. ಎಂಥ ಸ್ಥಿತಿ ಬಂತಪ್ಪ ಅಂತ ಕಣ್ಣೀರ್​ ಹಾಕ್ತಿದ್ದಾರೆ. ಅದೆಷ್ಟೋ ಜನ, ಈ ಕೆಟ್​ ರೋಗ ಹೇಗಿದೆ ಅನ್ನೋದು ಕೂಡ ನಮಗೆ ಗೊತ್ತಿಲ್ಲ, ಎಲ್ಲಿಂದಲೋ ಬಂದು ನಮಗೆ ಇಷ್ಟು ಹಿಂಸೆ ಕೊಡ್ತಿದೆ ಅಂತ ಹಿಡಿ ಶಾಪ ಹಾಕ್ತಿದ್ದಾರೆ. ಇದೀಗ, ಈ ಕೊರೊನಾ ಡಬಲ್​ ಮ್ಯೂಟೆಂಟ್​ ಹೇಗಿರುತ್ತೆ ಅನ್ನೋದರ ಫೋಟೋವನ್ನ ಯೂನಿವರ್ಸಿಟಿ ಆಫ್ ಬ್ರಿಟಿಶ್ ಕೊಲಂಬಿಯಾದ ಸಂಶೋಧಕರು ಹೊರಗೆ ಬಿಟ್ಟಿದ್ದಾರೆ. ಇದೇ ಯೂನಿವರ್ಸಿಟಿ ಮೊದಲು ಕೊರೊನಾ ವೇರಿಯೆಂಟ್​ ಹೇಗಿರಲಿದೆ ಅನ್ನೋದನ್ನ ತೋರಿಸಿದ್ದಾರೆ.

ಹೇಗಿದೆ ಕೊರೊನಾ ವೈರಸ್​ ಮ್ಯೂಟೆಂಟ್​..?
ಚಿತ್ರವನ್ನ ಒಮ್ಮೆ ಗಮನಿಸಿದ್ರೆ, ಅದು ಆಂಗ್ಲ ಭಾಷೆಯ ‘V’ ಅಕ್ಷರವನ್ನ ಹೋಲುತ್ತದೆ. ಹೌದೂ, ಈ ವೈರಸ್​ ವಿ ಅಕ್ಷರದ ಆಕಾರದಲ್ಲಿರೋದರಿಂದ ಇದು ವ್ಯಾಕ್ಸಿನೇಷನ್ ​(ಲಸಿಕೆ)ಯನ್ನೂ ಹಾಕಿಸಿಕೊಳ್ಳಬೇಕು ಅನ್ನೋದನ್ನ ಈ ಮ್ಯೂಟೆಂಟ್​ ಚಿತ್ರ ಹೋಲಿಕೆಯಲ್ಲಿದೆಯಂತೆ. ಹೀಗಾಗಿ,ಕೊಲಂಬಿಯಾ ಯೂನಿವರ್ಸಿಟಿಯ ಸಂಶೋಧಕರು ಎಲ್ಲರೂ ಲಸಿಕೆಯನ್ನ ಪಡೆದು ಕೊಳ್ಳಿ ಅನ್ನೋ ಕಿವಿ ಮಾತನ್ನು ಹೆಳಿದ್ದಾರೆ.

ಪಿನ್​ಗಿಂತಲೂ ಸಣ್ಣದಾಗಿದೆ ಈ ಡಬಲ್​ ಮ್ಯೂಟೆಂಟ್​!
ಯೂನಿವರ್ಸಿಟಿಯ ಪ್ರೊಫೆಸರ್​ ಡಾ. ಶ್ರೀರಾಮ್​ ಸುಬ್ರಮಣಿಯಮ್​ ಹೇಳ್ತಾರೆ, ಈ ಡಬಲ್​ ಮ್ಯೂಟೆಂಟ್​ ಕೊರೊನಾ ವೈರಸ್​ ಏನಿದೆ ಅದು, ಪಿನ್​ನ ತಲೆ ಭಾಗ ಏನಿದೆ ಅದಕ್ಕಿಂತಲೂ 1ಲಕ್ಷ ಪಟ್ಟು ಸಣ್ಣದಾಗಿದ್ಯಂತೆ.ಆದ್ರೆ, ಈ ಸಣ್ಣ ರೋಗಾಣು ಹೇಗಿರುತ್ತೆ ಅಂತ ನೋಡಲು ಅವರು ಕ್ರೈಯೋ ಎಲೆಕ್ಟ್ರಾನ್​ ಮೈಕ್ರೋಸ್ಕೋಪ್​ನ್ನ ಬಳಸಿ ಈ ಮ್ಯೂಟೆಂಟ್​ ಯಾವ ಆಕಾರಾದಲ್ಲಿದೆ ಅನ್ನೋದನ್ನ ಕಂಡು ಹಿಡಿದರಂತೆ.
ಅಲ್ಲದೇ, ಸುಬ್ರಮಣ್ಯಂರವರು ಹೇಳೋದೇನಂದರೆ, ಲಸಿಕೆ ಪಡೆಯೋದು ತುಂಬಾ ಮುಖ್ಯ.ಎಷ್ಟು ಸಣ್ಣದಾದ ವೈರಸ್​ ನಮ್ಮ ದೇಹದೊಳಗೆ ಹೊಕ್ಕಿ ಪ್ರಾಣ ತಿನ್ನುತ್ತಿದೆಯೋ, ಹಾಗೆ, ನಾವು, ಲಕಸಿಕೆ ಪಡೆದು, ಈ ರೋಗಾಣುವಿನೊಂದಿಗೆ ಹೊಡೆದಾಡಬೇಕು ಹಾಗೇ ಕೊರೊನ ಹೠರಡದಂತೆ ನೋಡಿಕೊಳ್ಳಬೇಕು ಅಂತ ಹೇಳಿದ್ದಾರೆ.

The post ಕೊರೊನಾ ಡಬಲ್​ ಮ್ಯೂಟೆಂಟ್​ ಹೇಗಿರುತ್ತೆ ಗೊತ್ತಾ?​ ರಿಲೀಸ್​ ಆಯ್ತು ಫೋಟೋ! appeared first on News First Kannada.

Source: newsfirstlive.com

Source link