ಚಾಮರಾಜನಗರ: ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಗುಂಡ್ಲುಪೇಟೆ ಪೊಲೀಸರಿಗೆ ಸ್ಟೀಮ್ ವ್ಯವಸ್ಥೆ ಮಾಡಲಾಗಿದೆ.

ಕುಕ್ಕರ್ ಗೆ ನೀರು, ಅರಿಶಿನ, ಮೆಣಸು, ಜೀರಿಗೆ ಹಾಕಿ ಕುದಿಸಿ ಕುಕ್ಕರ್ ನಲ್ಲಿ ಬರುವ ಸ್ಟೀಮ್ ಪೈಪ್‍ಗಳ ಮೂಲಕ ಸರಬರಾಜಾಗುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಒಮ್ಮೆಗೆ ನಾಲ್ಕು ಮಂದಿ ಪೊಲೀಸರು ಸ್ಟೀಮ್ ತೆಗೆದುಕೊಳ್ಳಬಹುದಾಗಿದೆ.

ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ಹೋರಾಡುತ್ತಿರುವ ಪೊಲೀಸರೀಗ ಕೊರೊನಾಗೆ ತುತ್ತಾಗದಂತೆ ರಕ್ಷಿಸಿಕೊಳ್ಳಲು ಆಯುರ್ವೇದದ ಹಬೆಯ ಮೊರೆ ಹೋಗಿದ್ದಾರೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಸ್ಟೀಮ್ ವ್ಯವಸ್ಥೆ ಮಾಡಿಕೊಂಡಿದ್ದು, ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮತ್ತು ಕರ್ತವ್ಯದ ನಂತರ 5 ನಿಮಿಷಗಳ ಕಾಲ ಪೊಲೀಸ್ ಸಿಬ್ಬಂದಿ ಆಯುರ್ವೇದದ ಹಬೆ ತೆಗೆದುಕೊಳ್ಳುತ್ತಿದ್ದಾರೆ. ಜನರ ನಡುವೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಠಾಣೆ ಪಿಎಸ್‍ಐ ರಾಜೇಂದ್ರ ಕೈಗೊಂಡ ಕ್ರಮಕ್ಕೆ ಸಹೋದ್ಯೋಗಿಗಳು ಸಂತಸಗೊಂಡಿದ್ದಾರೆ.

The post ಕೊರೊನಾ ತಡೆಗಾಗಿ ಗುಂಡ್ಲುಪೇಟೆ ಪೊಲೀಸರಿಗೆ ಸ್ಟೀಮ್ ವ್ಯವಸ್ಥೆ appeared first on Public TV.

Source: publictv.in

Source link